ಮಹಾದಾಯಿ ಹೋರಾಟ ಬಂದ್- ನಷ್ಟ ಪರಿಹಾರಕ್ಕೆ ಸಂಪರ್ಕಿಸಿ
ದಾವಣಗೆರೆ : ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಡಿ.ಕೆ ಶಿವಕುಮಾರ್ ಅವರ ದಿನಾಂಕ 04.06.2019 ರಿಂದ 11.09.2019ರ ಅವಧಿಯಲ್ಲಿ ಹಾಗೂ ಮಾಹದಾಯಿ ನದಿ ವಿಷಯದ ಕುರಿತಾಗಿ ನಡೆದ ಬಂದ್ ಕಾರಣದಿಂದ ದಿನಾಂಕ:25.01.2018 ರಿಂದ 12.04.2018ರ ಅವಧಿ ಹಾಗೂ 12.04.2018 ರಂದು ನಡೆದ ಘಟನೆಗಳಲ್ಲಿ ಯಾವುದೇ ಹಾನಿ ಅಥವಾ ನಷ್ಟ ಸಂಭವಿಸಿದ್ದಲ್ಲಿ ಆ ಬಗ್ಗೆ ಪರಿಹಾರವನ್ನು ನೀಡಲು ನಿವೃತ್ತ ಜಿಲ್ಲಾ ನ್ಯಾಯಧೀಶರಾದ ಶ್ರೀ ಸಿ.ಆರ್. ಬೆನಕನಹಳ್ಳಿ ಹಾಗೂ ಮಹಮ್ಮದ್ಗೌಸ್, ಮೊಹಿದ್ದಿನ್ ಪಾಟೀಲ್ ಅವರನ್ನು ಕ್ಲೇಮ್ ಕಮೀಷನರ್ಗಳಾಗಿ ನೇಮಕ ಮಾಡಲಾಗಿರುತ್ತದೆ.
ನಷ್ಟ ಸಂಭವಿಸಿದ ಭಾದಿತ, ನೊಂದ ವ್ಯಕ್ತಿಗಳು ಈ ಪ್ರಕಟಣೆಯ ದಿನಾಂಕದಿಂದ 60 ದಿನಗಳ ಒಳಗೆ ಸಂಭದಿಸಿದ ಕ್ಲೇಮ್ ಕಮೀಷನರ್ ಅವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಸತ್ರ ನ್ಯಾಯಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.