Mahisha dasara; ಮೈಸೂರು ವ್ಯಾಪ್ತಿಯಡಿ ಸೆಕ್ಷನ್ 144 ಜಾರಿ
ಮೈಸೂರು, ಅ.12: ಮಹಿಷಾ ದಸರಾ (mahisha dasara) ಪ್ರಾರಂಭವಾಗುವ ಮುನ್ನವೇ ಆಚರಣೆ ವಿಚಾರವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಟೌನ್ ಹಾಲ್ ಹೊರತುಪಡಿಸಿ ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಾಗಬೇಕು ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್. ಬಿ ಆದೇಶಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಅಕ್ಟೋಬರ್ 12 ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್ 14ರ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧ ಹೇರಲಾಗಿದ್ದು, ಮೈಸೂರು ನಗರ ವ್ಯಾಪ್ತಿಯಲ್ಲಿ ಯಾವುದೇ ಸಭೆ-ಸಮಾರಂಭ, ರ್ಯಾಲಿಗಳನ್ನು ನಿಷೇಧಿಸಲಾಗಿದ್ದು, ಯಾವುದೇ ಸಂಘಟನೆಗಳು ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಥವಾ ಸಭೆ-ಸಮಾರಂಭದ ಮೆರವಣಿಗೆ, ಪ್ರತಿಭಟನೆ, ರ್ಯಾಲಿ ನಡೆಸಲು ಪ್ರಯತ್ನಿಸಿದ್ದಲ್ಲಿ ಆ ಕೂಟವನ್ನು ಅಕ್ರಮ ಕೂಡವೆಂದು ಪರಿಗಣಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು.
Dasara; ದಸರಾ ಕ್ರೀಡಾ ಜ್ಯೋತಿ ಬೆಳಗಿಸಿದ ಡಾ.ಎಂ.ಪಿ.ವರ್ಷ
ಯಾವುದ್ದಕ್ಕೆ ಅನ್ವಯಿಸುವುದಿಲ್ಲ?
1. ಮದುವೆ ಸಮಾರಂಭಗಳು
2. ಶವ ಸಂಸ್ಕಾರಗಳು
3. ಶಾಲಾ, ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯಿಸುವುದಿಲ್ಲ
urdu school; ಚನ್ನಗಿರಿ ಶಾಸಕರಿಂದ ವಸತಿ ಸಚಿವರ ಭೇಟಿ
ಯಾವುದೆಲ್ಲ ನಿಷೇಧ?
1. ಯಾವುದೇ ಮೆರವಣಿಗೆ, ಪ್ರತಿಭಟನೆ, ಬೈಕ್ ರ್ಯಾಲಿ ನಡೆಸುವುದು
2. ಐದು ಜನರಿಗಿಂತ ಹೆಚ್ಚು ಮಂದಿ ಸೇರುವುದು
3. ಪರ-ವಿರೋಧ ಘೋಷಣೆ ಕೂಗುವುದು
4. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು
5. ಬಹಿರಂಗ ಸಭೆ-ಸಮಾರಂಭ ನಡೆಸುವುದು
6. ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ ಮಾಡುವುದು, ಧ್ವನಿವರ್ಧಕ ಬಳಸುವುದು
7. ಫ್ಲೇಕ್ಸ್, ಬ್ಯಾನರ್ ಅಳವಡಿಸುವುದು
8. ಕರಪತ್ರಗಳನ್ನು ಹಂಚುವುದು
9. ಮೂರ್ತಿ ಮೆರವಣಿಗೆ ಮಾಡುವುದು