ಶಿವಶಂಕರಪ್ಪ, ಮಲ್ಲಿಕಾರ್ಜುನ್ ಅವರ ಫೋಟೋ ಸರಿಪಡಿಸಿ
ದಾವಣಗೆರೆ: ಕಳೆದ ವಿಧಾನಸಭೆ ಚುನಾವಣೆ ಮುಗಿದು ಎಷ್ಟೋ ದಿನಗಳು ಕಳೆದಿವೆ. ಇನ್ನೇನು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿದೆ.
ಆದರೆ ವಿಧಾನಸಭಾ ಚುನಾವಣೆ ವೇಳೆ ದಾವಣಗೆರೆ ಪ್ರವೇಶ ದ್ವಾರಗಳಲ್ಲಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಗಳಿರುವ ಬೋರ್ಡ್‌ಗಳನ್ನು ಸರಿಪಡಿಸದೆ ಮಹಾನಗರ ಪಾಲಿಕೆ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ.
ವಿಧಾನಸಭಾ ಚುನಾವಣಾ ವೇಳೆ ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರ ಭಾವಚಿತ್ರಕ್ಕೆ ಕಪ್ಪು ಬಣ್ಣ ಹಚ್ಚಿ ಮರೆ ಮಾಚಲಾಗಿತ್ತು. ಆದರೆ ಚುನಾವಣೆ ಮುಗಿದು ಒಂದೂವರೆ ವರ್ಷವಾದರೂ ಬಾತಿಮಾರ್ಗವಾಗಿ ದಾವಣಗೆರೆಗೆ ಆಗಮಿಸುವ ಪ್ರವೇಶ ಹಾಗೂ ಆವರಗೆರೆ ಮಾರ್ಗವಾಗಿ ದಾವಣಗೆರೆ ಸಿಟಿಗೆ ಬರುವ ಪ್ರವೇಶದಲ್ಲಿರುವ ಬೋರ್ಡುಗಳನ್ನು ಸರಿಪಡಿಸುವ ಗೋಜಿಗೆ ಹೋಗದೆ, ಹಿರಿಯರಿಗೆ ಅವಮಾನ ಮಾಡಿದಂತಾಗಿದೆ.
ಕೂಡಲೇ ಪಾಲಿಕೆ ಅಧಿಕಾರಿಗಳು ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರ ಮಲ್ಲಿಕಾರ್ಜುನ ಇಂಗಳೇಶ್ವರ ಆಗ್ರಹಿಸಿದ್ದಾರೆ.