ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ .

IMG-20210904-WA0007

 

ಜಗಳೂರು:- ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮಾ ಪಂಚಾಯತಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಬಸವನಕೋಟೆ ಗ್ರಾಮ ಘಟಕದ ವತಿಯಿಂದ ಪ್ರತಿಭಟಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗಳಿ ಮನವಿ ಸಲ್ಲಿಸಿದರು.

ಇದೇ ವೇಳೆ ಕರವೇ ಗ್ರಾಮ ಘಟಕದ ಅಧ್ಯಕ್ಷ ಗಿರೀಶ್ ಮಾತನಾಡಿದ ಅವರು ಗ್ರಮಾದಲ್ಲಿ ಬಹುತೇಕ ಕಡೇ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲ್ಲಿ ಜೀವನ ಜೀವನ ಸಾಗಿಸುತಿದ್ದು ಇದಕ್ಕೆ ಸಂಭಂದ ಪಟ್ಟ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಬೇಗನೆ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಹಾಂತೇಶ್ , ಮಹಿಳಾ ಉಪಾಧ್ಯಕ್ಷೆ ಶಾಯಿನ ಬೇಗಂ , ಸೊಕ್ಕೆ ಹೋಬಳಿ ಅಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಗ್ರಾಮ ಘಟಕದ ಗೌರವಾಧ್ಯಕ್ಷ ಕೊಟ್ರೇಶ್, ಅಧ್ಯಕ್ಷ ಬಸವರಾಜ, ಉಪಾಧ್ಯಕ್ಷ ಉಮೇಶ್, ವಿನಯ್ ಕುಮಾರ್ ಪದಾಧಿಕಾರಿಗಳಾದ ಚನ್ನಬಸಪ್ಪ , ಅನಿಲ್ , ಸಿದ್ದೇಶ್ , ವಿನೋದ್ ರಾಜ್, ಬಸವರಾಜ, ಗ್ರಾಮಸ್ಥರರಾದ ಮಹಿಳೆಯರಾದ ಸುಜಾತ ಗಿರಿಜಮ್ಮ ಸೇರಿದಂತೆ ಗ್ರಾಮದ ಮುಖಂಡರು ರೈತ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!