ರಾಜ್ಯ ಸುದ್ದಿ

ಮಂಗಳೂರು: ಸಾಧಕರ ಸಾಧನೆಯ ಕಿರೀಟಕ್ಕೆ ‘ಸಂದೇಶ ಪ್ರಶಸ್ತಿ’ಯ ಗರಿ

ಮಂಗಳೂರು: ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ-ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದಲ್ಲಿ ಪ್ರತಿಷ್ಠಿತ “ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಬಳ್ಳಾರಿ ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ಸುದೀಪ್ ಪೌಲ್, ಟ್ರಸ್ಟಿಗಳಾದ ರೋಯ್ ಕ್ಯಾಸ್ತಲಿನೊ ಮತ್ತು ವಂ| ಐವನ್ ಪಿಂಟೊ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ| ವಲೇರಿಯನ್ ರಾಡ್ರಿಗಸ್. ಐರಿನ್ ರೆಬೆಲ್ಲೋ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

‘ಸಂದೇಶ’ ಪ್ರಶಸ್ತಿ ಪುರಸ್ಕೃತರು:

  • ಕನ್ನಡ ವಿಭಾಗದ ಪ್ರಶಸ್ತಿ ರಾಘವೇಂದ್ರ ಪಾಟೀಲ್,
  • ಕೊಂಕಣಿ ವಿಭಾಗದ ಪ್ರಶಸ್ತಿ: ಆ್ಯಂಡ್ರೂ ಎಲ್. ಡಿ’ಕುನ್ಹಾ
  • ತುಳು ವಿಭಾಗದ ಪ್ರಶಸ್ತಿ: ಡಾ| ಚಿನ್ನಪ್ಪ ಗೌಡ
  • ಸಂದೇಶ ಮಾಧ್ಯಮ ಪ್ರಶಸ್ತಿ: ಶಿವಾಜಿ ಗಣೇಶನ್,
  • ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ: ಜೋಯ್ಸ ಒಝಾರಿಯೋ,
  • ಸಂದೇಶ ಕಲಾ ಪ್ರಶಸ್ತಿ: ಎಂ.ಎಸ್.ಮೂರ್ತಿ,
  • ಸಂದೇಶ ಶಿಕ್ಷಣ ಪ್ರಶಸ್ತಿ: ಕೋಟಿ ಗಾನಹಳ್ಳಿ ರಾಮಯ್ಯ
  • ಸಂದೇಶ ವಿಶೇಷ ಪ್ರಶಸ್ತಿ : ಪ್ರೇರಣಾ ಟ್ರಸ್ಟ್
  • ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ.: ಡಾ| ಸಬಿಹಾ ಭೂಮಿಗೌಡ
Click to comment

Leave a Reply

Your email address will not be published. Required fields are marked *

Most Popular

To Top
error: Content is protected !!