ಟ್ವಿಟರ್ ಕಂಪನಿ ತೊರೆದ ಮನೀಶ್ ಮಹೇಶ್ವರಿ.! ಮುಂದೇನು ಮಾಡ್ತಾರೆ ಗೊತ್ತಾ ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ.!?
ಬೆಂಗಳೂರು: ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಟ್ವಿಟರ್‌ಗೆ ವಿದಾಯ ಹೇಳಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದಿಂದ ಮನೀಶ್ ಮಹೇಶ್ವರಿ ಆಗಸ್ಟ್‌ನಲ್ಲಿ ನಿರ್ಗಮಿಸಿದ್ದರು. ಆ ನಂತರ ಅವರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿಯನ್ನು ಟ್ವಿಟರ್ ನೀಡಿತ್ತು.
ಆದರೆ, ವೈಯಕ್ತಿಕ ಕಾರಣಕ್ಕಾಗಿ ಟ್ವಿಟ್ಟರ್ ತೊರೆದಿರುವ ಮನೀಶ್ ‘ಭಾರವಾದ ಹೃದಯದಿಂದ ನಾನು ಟ್ವಿಟರ್ ಅನ್ನು ತೊರೆಯುತ್ತಿದ್ದೇನೆ. ಮೂರು ವರ್ಷಗಳ ಬಳಿಕ ಶಿಕ್ಷಣ ಹಾಗೂ ಬೋಧನೆಗೆ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತಿದ್ದೇನೆ‘ ಎಂದು ತಿಳಿಸಿದ್ದಾರೆ.