ದಾವಣಗೆರೆ, ಹರಿಹರ ತಾಲ್ಲೂಕಿನಾದ್ಯಂತ ಮಾರ್ಚ್ 15,16 ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 

ದಾವಣಗೆರೆ: ಜಿಲ್ಲಾ ಪೋಲಿಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ಇವರು ಈಗಲೇ ಹಿಜಾಬ್‌ ವಿವಾದ ಕುರಿತಂತೆ ಜಿಲ್ಲೆಯಲ್ಲಿ ದಾವಣಗೆರೆ ನಗರ, ಹರಿಹರ ನಗರ, ಮಲೆಬೆನ್ನೂರು ಪಟ್ಟಣ ಮತ್ತು ನಲ್ಲೂರು ಗ್ರಾಮದಲ್ಲಿ, ಕೆಲವು ಘಟನೆಗಳು ನಡೆದ ಪ್ರಕರಣಗಳಲ್ಲಿ ದಾಖಲಾಗಿರುತ್ತದೆ. ಹೀಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯ ಕುರಿತು ದಿನಾಂಕ: 15.03.2022 ರಂದು ಅಂತಿಮ ತೀರ್ಪು ಪ್ರಕಟಿಸಲಿರುವುದಾಗಿ ತಿಳಿದು ಬಂದಿದೆ.

ಇದರ ಜೊತೆಗೆ ದಿನಾಂಕ 13.03.2022 ರಿಂದ ದಾವಣಗೆರೆ ನಗರದಲ್ಲಿ ನಗರ ದೇವತೆ ದುರ್ಗಾಂಬಿಕ ದೇವಿ ಜಾತ್ರೆ ಮಹೋತ್ಸವ ನಡೆಯುತ್ತಿದ್ದು, ದಿನಾಂಕ 15.03.2022 ಮತ್ತು 16,03.2022 ರಂದು ಪ್ರಯುಖ ದಿನವಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು, ಇದೇ ರೀತಿ ಹರಿಹರ ತಾಲ್ಲೂಕಿನಲ್ಲಿ ಜಾತ್ರೆಗಳು ನಡೆಯುತ್ತಿರುತ್ತವೆ. ದಾವಣಗೆರೆ ಮತ್ತು ಹರಿಹರ ತಾಲ್ಲೂಕುಗಳು ಸೂಕ್ಷ್ಮವಾಗಿರುವುದರಿಂದ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ದಾವಣಗೆರೆ ಜಿಲ್ಲೆಯ ದಾವಣಗರ ತಾಲ್ಲೂಕು ಮತ್ತು ಹರಿಹರ ತಾಲ್ಲೂಕಿನಲ್ಲಿ ಮಾತ್ರ  15.03.2022 ಹಾಗೂ. 16.03.2022 ಶಾಲಾ ಕಾಲೇಜುಗಳಿಗೆ ರಜೆ  ಮಾಡಲು ಪೊಲೀಸ್ ಅಧೀಕ್ಷಕರು ಕೋರಿರುವರು, ಪ್ರಯುಕ್ತ, ಈ ಬಗ್ಗೆ ಪರಿಶೀಲಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!