Mayor ST Veeresh Dance: ಶೋಭಾಯಾತ್ರೆಯಲ್ಲಿ ಮೇಯರ್ ಎಸ್ ಟಿ ವೀರೇಶ್ ಭರ್ಜರಿ ನೃತ್ಯ

ದಾವಣಗೆರೆ: ಇಂದು ವಿಜಯದಶಮಿ ಅಂಗವಾಗಿ ನಡೆದ ಶೋಭಾಯಾತ್ರೆಯ ಮೆರವಣಿಗೆ ಯಲ್ಲಿ ಮೇಯರ್ ಎಸ್.ಟಿ. ವೀರೇಶ್ ಅಭಿಮಾನಿಗಳೊಂದಿಗೆ ಸೇರಿ ಹೆಜ್ಜೆ ಹಾಕಿದರು.
ದಸರಾ ಹಬ್ಬದ ಅಂಗವಾಗಿ ನಡೆದ ಶೋಭಾಯಾತ್ರೆಯು ನಗರದ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾಗಿ ಹಾಸಭಾವಿ ವೃತ್ತದ ಬಳಿ ಬಂದಾಗ ಅಭಿಮಾನಿಗಳು ಮೇಯರ್ ಅನ್ನು ಹೆಗಲ ಮೇಲೆ ಹೊತ್ತು ಕೊಂಡು ಬಂದು ಜೈಕಾರ ಕೂಗಿದರು.
*ಮೇಯರ್ ಎಸ್ ಟಿ ವೀರೇಶ್ ಭರ್ಜರಿ ನೃತ್ಯದ ಜಲಕ್..*
ನಂತರ ಡೊಳ್ಳು ವ್ಯಾದ್ಯಕ್ಕೆ ಮೇಯರ್ ಅಭಿಮಾನಿಗಳೊಂದಿಗೆ ಸೇರಿ ಜೊತೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಈ ವೇಳೆ ಭಾರತಮಾತೆಗೆ, ತಾಯಿ ಚಾಮುಂಡಿಗೆ, ದುರ್ಗಾಮಾತೆಗೆ ಜೈಕಾರ ಹಾಕಿದ್ದು, ಮುಗಿಲುಮುಟ್ಟುವಂತಿತ್ತು.