Mayor; ಸ್ಥಳೀಯ ದೇಶಿ ಮೂಲದ ಸಸಿಗಳ ಬೆಳೆಸಲು ಕ್ರಮ; ದಾವಣಗೆರೆ ಮೇಯರ್
ದಾವಣಗೆರೆ: Mayor ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದ ಮೂಲಕ ಸ್ಥಳೀಯ ದೇಶಿಯ ಮೂಲದ ಸಸಿಗಳನ್ನು ನೆಡಲಾಯಿತು.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಗುಂಡಿ ಮಹದೇವಪ್ಪ ಪಾರ್ಕ್ನಲ್ಲಿ ‘ಅಮೃತ ವಾಟಿಕಾ’ ಸಸಿ ನೆಡುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮವಹಿಸಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.೩೮ ಎಂ.ಸಿ.ಸಿ ಬಿ ಬ್ಲಾಕ್ ನ ಗುಂಡಿ ಸರ್ಕಲ್ ಪಾರ್ಕ್ ನಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಡಿಯಲ್ಲಿ ಐದು ವಿಶೇಷ ಗಿಡಗಳನ್ನು ನೆಡಲಾಯಿತು. ಫಿಲಿಶಿಯಂ ಡೆಸಿಪೆನ್ಸಿ, ಬೆಂಜಮಿನ್ ಫೈಕಸ್, ಬಾಟಲ್ ಬ್ರಶ್, ಲೆಜೆಸ್ಟ್ರೋಮಿಯ ತಬುಬಿಯ ರೋಸಿಯ ಜಾತಿಯ ೧೦೦ ಸಸಿಗಳನ್ನು ನೆಡಲಾಯಿತು.
engineer couples; ಅಮೇರಿಕಾದಲ್ಲಿ ದಾವಣಗೆರೆ ಯುವ ಎಂಜಿನಿಯರ್ ದಂಪತಿ ದಾರುಣ ಸಾವು
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆಯ ಆಯುಕ್ತೆ ರೇಣುಕಾ, ಪಾಲಿಕೆ ಆಡಳಿತ ಪಕ್ಷದ ನಾಯಕ ಹಾಗೂ ಸದಸ್ಯ ಗಡಿಗುಡಾಳ್ ಮಂಜುನಾಥ್, ಪರಿಸರ ಜಗದೀಶ್, ಬಸವಣ್ಣ, ಅಜಯ್ ಪ್ರಕಾಶ್, ಪಾಲಿಕೆಯ ತೋಟಗಾರಿಕೆ ಸಿಬ್ಬಂದಿ ಹಾಜರಿದ್ದರು.