ಮೇಲ್ಛಾವಣಿ ಗಾಗಿ ಫ್ಲೆಕ್ಸ್ ಅಥವಾ ವೆಸ್ಟ್ ಬ್ಯಾನರ್ ಕೇಳಿದ್ರೆ ಮನೆನೆ ಕಟ್ಟಿಸಿಕೊಟ್ಟ ಪಾಲಿಕೆ ಸದಸ್ಯ ಶಿವಪ್ರಕಾಶ್
ದಾವಣಗೆರೆ : ಇಲ್ಲೊಬ್ಬ ಮಾದರಿ ಪಾಲಿಕೆ ಸದಸ್ಯ ದಾವಣಗೆರೆ ನಗರದ 19 ನೇ ವಾರ್ಡ್ನ ಮಹಾನಗರಕ್ಕೆ ಪಾಲಿಕೆ ಸದಸ್ಯ ಶಿವಪ್ರಕಾಶ್ ಮಾನವತೆ ಮೆರೆದ ಘಟನೆ ನಡೆದಿದೆ.
19ನೇ ವಾರ್ಡಿನ ವೃದ್ಧ ದಂಪತಿಗಳಿಗೆ ತಮ್ಮ ಮಗ ಜನ್ಮ ದಿನಕ್ಕಾಗಿ ಮನೆ ಕಟ್ಟಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ನಡೆದದ್ದಿಷ್ಟು ಶೇಖರಪ್ಪ ನಗರದ ಶೇಖರಪ್ಪ ನಗರದ ನಿವಾಸಿ ದೊರೆಸ್ವಾಮಿ ಚಂದ್ರಮ್ಮ ವೃದ್ಧ ದಂಪತಿಗಳು ವಾಸವಾಗಿದ್ದು ಅವರ ಮೂರು ಗಂಡು ಮಕ್ಕಳು ತೀರಿಕೊಂಡ ನಂತರ ಸೊಸೆಯಂದಿರು ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಈ ದಂಪತಿಗಳು ಒಂದು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು ಮಳೆಗಾಲದ ಸಮಯದಲ್ಲಿ ಪಾಲಿಕೆಯ ಸದಸ್ಯರ ಬಳಿ ಹೋಗಿ ಮೇಲ್ಛಾವಣಿ ಗಾಗಿ ಫ್ಲೆಕ್ಸ್ ಅಥವಾ ವೆಸ್ಟ್ ಬ್ಯಾನರ್ ಇದ್ದರೆ ಕೊಡಿ ಮಳೆಯಿಂದ ಮನೆ ಸೋರುತ್ತಿದೆ ಕೇಳಿದ ಸಂದರ್ಭದಲ್ಲಿ.
ಪಾಲಿಕೆ ಸದಸ್ಯ ಗುಡಿಸಲಿಗೆ ಭೇಟಿನೀಡಿ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿ ಬಂದಿದ್ದರು. ಇದೀಗ ಸುಮಾರು ಎರಡು ಲಕ್ಷ ಮೌಲ್ಯದಲ್ಲಿ ಮನೆ ನಿರ್ಮಿಸಿ ಕೊಟ್ಟಿದರೆ.
ಮನೆಗೆ ಸಿಮೆಂಟ್ ಇಟ್ಟಿಗೆ ಇಂದ ಕೂಡಿದ್ದು ಮೇಲ್ಛಾವಣಿಗೆ ಜಂಕ್ಷೀಟ್ ಬಳಸಿ ಸುಸ್ಥಿತಿಯ ಮನೆಯನ್ನು ನಿರ್ಮಿಸಿಕೊಟ್ಟಿದಾರೆ.
ಪಾಲಿಕೆ ಸದಸ್ಯನ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದೆ.