ಜ.1 ರಂದು ಅಮರಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ
ದಾವಣಗೆರೆ: ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಅಮರಶಿಲ್ಪಿ ಜಕಣಾಚಾರಿ
ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಶಿವಾತ್ಮನಂದ ಸರಸ್ವತಿ
ಮಹಾಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಜನವರಿ 1 ರಂದು ಬೆಳಗ್ಗೆ 9 ಗಂಟೆಗೆ ನಗರದ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಪ್ರಧಾನ
ಕಾರ್ಯದರ್ಶಿ ಬಿ.ವಿ.ಶಿವಾನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರಿ ಸ್ಮರಣೋತ್ಸವವನ್ನು ಕೋವಿಡ್ ನಿಯಮಾವಳಿಯಂತೆ ಸರಳವಾಗಿ
ಆಚರಿಸಲಾಗುವುದು. ಸಂಜೆ 5 ಗಂಟೆಗೆ ಇತ್ತೀಚೆಗೆ ನಿಧನರಾದ ಚಿಕ್ಕಬಳ್ಳಾಪುರ
ನಂದಿ ಜ್ಞಾನಾನಂದ ಆಶ್ರಮದ ಪೀಠಾಧ್ಯಕ್ಷ, ರಾಷ್ಟçಸಂತ ಶ್ರೀ ಶಿವಾತ್ಮನಂದ
ಸರಸ್ವತಿ ಮಹಾಸ್ವಾಮಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ಇರುತ್ತದೆ
ಎಂದು ತಿಳಿಸಿದರು.
ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಚನ್ನಗಿರಿ ವಡ್ನಾಳ್ ಸಾವಿತ್ರಿ ಪೀಠದ ಶ್ರೀ
ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಮತ್ತು ಆವರಗೊಳ್ಳ ಪುರವರ್ಗ ಮಠದ ಶ್ರೀ
ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವನ್ನು ವಹಿಸಲಿದ್ದು, ಸಮಾಜದ ಜಿಲ್ಲಾಧ್ಯಕ್ಷ
ಬಸಾಪುರದ ನಾಗೇಂದ್ರಾಚಾರ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಸಮಾಜದ ಮುಖಂಡರಾದ ಬಸಾಪುರದ ನಾಗೇಂದ್ರಾಚಾರ್, ವಿ.ಎಂ.ಕೊಟ್ರೇಶಾಚಾರ್,
ಬೇತೂರು ವಿಜಯಕುಮಾರ್, ಬಿ.ಸಿದ್ದಾಚಾರ್, ಮಾವಿನಮರದ ವೀರಭದ್ರಾಚಾರ್,
ಜಿ.ವಿ.ಬ್ರಹ್ಮಾಚಾರ್, ಬಸವರಾಜಾಚಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.