ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ

ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ
ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನೆಲದ ಮೇಲಿದ್ದ ಪ್ಲಾಸ್ಟಿಕ್ ಚೀಲಗಳು ಹಾರಾಡಿದ ಪರಿಣಾಮ ರೀ ಲ್ಯಾಂಡ್ ಮಾಡಿದ ಘಟನೆ ನಡೆದಿದೆ.
ಜೇವರ್ಗಿ ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು.
ವಿಜಯಪುರ- ಕಲಬುರಗಿ ರಸ್ತೆ ಬದಿಯ ಜಮೀನಿನಲ್ಲಿನ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿತ್ತು. ಹೆಲಿಪ್ಯಾಡ್ ಸಮೀಪದ ಜಮೀನಿನಲ್ಲಿನ ಮೆಣಸಿನಕಾಯಿ ಹಾಗೂ ಚಪ್ಪರದ ಮೇಲೆ ಹೊದಿಸಿದ್ದ ತಾಡಪತ್ರಿಗಳು ಹಾರಾಡಿದವು. ಪ್ಲಾಸ್ಟಿಕ್ ಬ್ಯಾರೆಲ್, ಹೆಲ್ಮೆಟ್, ಪ್ಲಾಸ್ಟಿಕ್ ಚೀಲಗಳು ಗಾಳಿಯಲ್ಲಿ ತೇಲಾಡಿದವು.
ಪೈಲಟ್ ಸಮಯ ಪ್ರಜ್ಞೆಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ.
ಹೆಲಿಕಾಪ್ಟರ್ ಪೈಲಟ್ ಸಮಯಪ್ರಜ್ಞೆ ಮೆರೆದು ತಕ್ಷಣವೇ ಲ್ಯಾಂಡಿಂಗ್ ಮಾಡದೆ ಮೇಲ್ಮುಖವಾಗಿ ಹಾರಾಟ ನಡೆಸಿದರು. ಒಂದು ಸುತ್ತು ಹಾಕಿ ಹೆಲಿಪ್ಯಾಡ್‌ನ ಮತ್ತೊಂದು ಭಾಗದಿಂದ ನಿಧಾನಕ್ಕೆ ಲ್ಯಾಂಡ್ ಮಾಡಿದರು. ಯಡಿಯೂರಪ್ಪ ಅವರು ಸುರಕ್ಷಿತವಾಗಿ ಇಳಿದರು.
ಹೆಲಿಪ್ಯಾಡ್ ಸಮೀಪದ ಜಮೀನಿನಲ್ಲಿನ ಮೆಣಸಿನಕಾಯಿ ಹಾಗೂ ಚಪ್ಪರದ ಮೇಲೆ ಹೊದಿಸಿದ್ದ ತಾಡಪತ್ರಿಗಳು ಹೆಲಿಕಾಪ್ಟರ್ ಗಾಳಿಗೆ ಹಾರಾಡಿದವು. ಯಾವುದೇ ಅನಾಹುತ ಸಂಭವಿಸಿಲ್ಲ.