ಶಾಸಕ ಮಾಡಾಳು ವಿರೂಪಾಕ್ಷ ಮಿಸಿಂಗ್.! ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ವಶಕ್ಕೆ ಪಡೆದು ಬಿಡುಗಡೆ

MLA Madalu Virupaksha is missing.! Youth Congress president Nikhil Kondajji was arrested and released

ಶಾಸಕ ಮಾಡಾಳು ವಿರೂಪಾಕ್ಷ ಮಿಸಿಂಗ್

ದಾವಣಗೆರೆ:ಲಂಚ ಪಡೆದ ಆರೋಪದಡಿ ಬಂಧನದ ಭೀತಿಯಲ್ಲಿ ತಲೆ ಮರೆಸಿಕೊಂಡಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಹುಡುಕಿ ಕೊಡಿ ಎಂಬ ಪೋಸ್ಟರನ್ನು ನಗರದ ಹಲವೆಡೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಲಾರಂಭಿಸಿದ್ದಾರೆ.

ದಾವಣಗೆರೆ ಯುತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ನೇತೃತ್ವದಲ್ಲಿ ಸೋಮವಾರ ಪೊಸ್ಟರ್ ಅಂಟಿಸಲಾಗುತ್ತಿದೆ.
ದಾವಣಗೆರೆ ರಾಮ್ ಆಂಡ್ ಕೋ ಸರ್ಕಲ್, ಖಾಸಗಿ ಬಸ್ ನಿಲ್ದಾಣದ ಬಳಿ ಪೊಸ್ಟರ್ ಈಗಾಗಲೇ ಪೋಸ್ಟರ್ ಅಂಟಿಸಲಾಗಿದ್ದು, ಲೊಕಾಯುಕ್ತ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ A1 ಆರೋಪಿ ಹುಡುಕಿ ಕೊಡಿ ಎಂದು ಅಂಟಿಸಲಾಗಿರುವ ಪೋಸ್ಟರ್‌ನಲ್ಲಿದೆ.


ವಿರೂಪಾಕ್ಷಪ್ಪ ಕಂಡರೆ ಕೂಡಲೇ 100ಕ್ಕೆ ಕರೆ ಮಾಡಿ ಎಂದೂ ಸಹ ಪೋಸ್ಟರ್‌ನಲ್ಲಿದೆ. ಪೋಸ್ಟರ್ ಅಂಟಿಸುತ್ತಿರುವ ವಿಷಯ ತಿಳಿದು ಪೊಲೀಸರು ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!