Heart Attack : ಸಂಚಾರಿ ಮಹಿಳಾ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು: ತಂದೆ ತಾಯಿ ಇಲ್ಲದ ಮಗು ಅನಾಥ

ಬೆಂಗಳೂರು : ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಮಹಿಳಾ ಸಿಬ್ಬಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಕೆಂಗೇರಿ ಸಂಚಾರಿ ಠಾಣಾ ಸಿಬ್ಬಂದಿ ಪ್ರಿಯಾಂಕಾ ಸಾವನ್ನಪ್ಪಿದ ಪೊಲೀಸ್ ಪೇದೆಯಾಗಿದ್ದಾ. ಪ್ರಿಯಾಂಕಾ ಅವರ ಪತಿ 2021ರಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದರು. ಆಗ ಪ್ರಿಯಾಂಕ ಗರ್ಭಿಣಿಯಾಗಿದ್ದರು.
ಇನ್ನು ಗಂಡನನ್ನು ಕೋವಿಡ್‌ನಿಂದ ಕಳೆದುಕೊಂಡರೂ ಧೃತಿಗೆಡದೆ ತನ್ನ ಸಂಚಾರಿ ಪೊಲೀಸ್ ಕರ್ತವ್ಯವನ್ನು ಮುಂದುವರೆಸಿಕೊಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಹುಟ್ಟುತ್ತಲೇ ತಂದೆ ಇಲ್ಲದೆ ಜನಿಸಿದ್ದ ಮಗು ಈಗ ಒಂದು ವರ್ಷದಲ್ಲೇ ಜನ್ಮ ನೀಡಿದ ತಾಯಿಯನ್ನೂ ಕಳೆದುಕೊಂಡು ಅನಾಥವಾಗಿದೆ.
ಭಾನುವಾರ ಎಂದಿನಿಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋದ ಮಹಿಳಾ ಪೊಲೀಸ್ ಪ್ರಿಯಾಂಕಾಗೆ ರಾತ್ರಿ 11.30ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಆಸ್ಪತ್ರೆಗೂ ಹೋಗಲಾಗದೆ ಹಾಸಿಗೆಯಲ್ಲಿಯೇ ನರಳಾಡಿ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.