ಮೋದಿಯವರೆ ದೇಶವನ್ನು ಅಂಬಾನಿ ಮತ್ತು ಅದಾನಿಗೆ ಮಾರಾಟ ಮಾಡಿ ನೀವು ರಾಜೀನಾಮೆ ಕೋಡಿ : ಶಶಿಧರ್ ಪಾಟೀಲ್

nsui dist shashidar patil

ದಾವಣಗೆರೆ: ರೈಲ್ವೆ ,ವಿಮಾನ , ಕೃಷಿಯನ್ನು ಖಾಸಗೀಕರಣ ಮಾಡಿ ಈಗ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ನಿಮ್ಮ ಸರ್ಕಾರದ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮೋದಿಯವರೇ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ದೇಶವನ್ನು ಅಂಬಾನಿ ಮತ್ತು ಅದಾನಿಗೆ ಮಾರಾಟ ಮಾಡಿ ನೀವು ರಾಜೀನಾಮೆ ಕೋಡಿ ಎಂದು ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟ ಸಮಸ್ಯೆಯಾಗಲಿದೆ ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿದೆ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದರಿಂದ ರೈತರ ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದ ಸಬ್ಸಿಡಿ ಬಂದ್ ಆಗುತ್ತದೆ ಅಲ್ಲದೆ ಖಾಸಗಿಯವರು ಮನಬಂದಂತೆ ವಿದ್ಯುತ್ ಬೆಲೆ ಏರಿಕೆ ಮಾಡುತ್ತಾರೆ.

ರೈತರ ಪಂಪ್‍ಸೆಟ್‍ಗಳಿಗೆ ಮೀಟರ್‍ಗಳನ್ನು ಅಳವಡಿಕೆ ಮಾಡುತ್ತಾರೆ ಇದರಿಂದ ರೈತರಿಗೆ ತೀವ್ರ ತೊಂದರೆಯಾಗಲಿದೆ
ಕೋರೋನ ಲಾಕ್ಡೌನ್ ಇಂದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಈಡಾಗಿದ್ದಾರೆ ಇಂತಹ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವುದು ಬಿಟ್ಟು ರೈತರಿಗೆ ಮತ್ತೊಂದು ಸಂಕಷ್ಟ ಕೊಡಲು ಮುಂದಾಗಿದೆ ಆದ್ದರಿಂದ ಕೃಷಿ ವಲಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಲು ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!