ಅಂಬೇಡ್ಕರ್ ಜನ್ಮದಿನಕ್ಕೆ ಮೋದಿ ಷಾ, ಬೊಮ್ಮಾಯಿ ಶುಭಾಶಯ

ಬೆಂಗಳೂರು: ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ.ಆರ್. ಅಂಬೇಡ್ಕರ್ ಅವರ 132ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡು ಹಲವು ನಾಯಕರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಸಮಾಜದ ವಂಚಿತ ಮತ್ತು ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಪೂಜ್ಯ ಬಾಬಾಸಾಹೇಬರಿಗೆ ಅವರ ಜನ್ಮ ದಿನದ ಶತ ನಮನಗಳು. ಜೈ ಭೀಮ್! ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಭಾರತೀಯರನ್ನು ಮುಕ್ತವಾಗಿಸಿ, ಅಧಿಕಾರ ಮತ್ತು ಮುಖ್ಯವಾಹಿನಿಗೆ ತಂದವರು. ಅವರ ಮಹಾಪರಿನಿರ್ವಾಣ ದಿನದಂದು, ಅವರಿಗೆ ನಮನಗಳು‘ ಎಂದು ಟ್ವೀಟಿಸಿದ್ದಾರೆ.
ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ ಡಾ.ಅಂಬೇಡ್ಕರ್ ರವರ ಸಾಧನೆ ಹಾಗೂ ದೇಶ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟಿಸಿದ್ದಾರೆ.