ರಾಷ್ಟ್ರೀಯ ಸುದ್ದಿ

ಬಸವ ಜಯಂತಿಯಂದು ಕನ್ನಡದಲ್ಲಿ ಟ್ವಿಟ್ ಮಾಡಿ ಶುಭಾಶಯ ಕೋರಿದ ಮೋದಿ

ಬಸವ ಜಯಂತಿಯಂದು ಕನ್ನಡದಲ್ಲಿ ಟ್ವಿಟ್ ಮಾಡಿ ಶುಭಾಶಯ ಕೋರಿದ ಮೋದಿ

ನವದೆಹಲಿ  :”ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ, ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡುವ ಮೂಲಕ ಬಸವಜಯಂತಿ ಶುಭಾಶಯ ಕೋರಿದ್ದಾರೆ.

ಹೌದು, ಇಂದು ನಾಡಿನೆಲ್ಲೆಡೆ ಬಸವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಕನ್ನಡಲ್ಲೇ ಟ್ವೀಟ್ ಮಾಡಿರುವ ಅವರು ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ಕವಿ ಮತ್ತು ಸಮಾಜ ಸುಧಾರಕ ಬಸವೇಶ್ವರರ ಜನ್ಮದಿನದಂದು ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಚಿಂತನೆಗಳು ಮತ್ತು ಆದರ್ಶಗಳು ಮಾನವೀಯತೆಯ ಸೇವೆಗೆ ಸ್ಫೂರ್ತಿ ನೀಡುತ್ತವೆ ಎಂದಿದ್ದಾರೆ.

 

Click to comment

Leave a Reply

Your email address will not be published. Required fields are marked *

Most Popular

To Top