ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕ ವಿಜಯಪ್ರಕಾಶ್ ಲಾಕ್ಡೌನ್ ನಿಯಮ ಉಲ್ಲಂಘನೆ : ಎಫ್ ಐ ಆರ್ ದಾಖಲಿಸುವಂತೆ ಪತ್ರ ಬರೆದ ಆರ್ ಟಿ ಐ ಸೇವಾ ಸಮಿತಿ
![ndma_rules_break_by_mp_tejasvi_soorya_singer_Vijay_prakash[1]](https://garudavoice.com/wp-content/uploads/2021/06/ndma_rules_break_by_mp_tejasvi_soorya_singer_Vijay_prakash1.jpg)
ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ
ಕರ್ನಾಟಕ ಆರ್ ಟಿ ಐ ವರ್ಕರ್ಸ್ ಸೇವಾ ಸಮಿತಿ ಒತ್ತಾಯಿಸಿದೆ.
ಜನಪ್ರತಿನಿಧಿಗಳು ಕನ್ನಡಿ ಇದ್ದ ಹಾಗೆ. ಅವರ ಪ್ರತಿಬಿಂಬವೇ ಸಮಾಜದ ಮೇಲೆ ಬಹುಮುಖ್ಯ ಪಾತ್ರವಹಿಸುತ್ತದೆ. ಆದರೆ, ಸಂಸದ ತೇಜಸ್ವಿ ಸೂರ್ಯ ಮತ್ತು ಖ್ಯಾತ ಗಾಯಕ ವಿಜಯಪ್ರಕಾಶ್ ಅವರು ಲಾಕ್ಡೌನ್ ಇರುವ ಈ ಸಂದರ್ಭದಲ್ಲಿ ಹೊಟೇಲ್ ವೊಂದರಲ್ಲಿ ಊಟ ಮಾಡಿ ಚರ್ಚೆ ಮಾಡುತ್ತಿರುವ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದು, ಕೂಡಲೇ ಹೋಟೆಲ್ ಮಾಲೀಕರು ಸೇರಿದಂತೆ ಸಂಸದರ ವಿರುದ್ಧ ಎಫ್ ಐಆರ್ ದಾಖಲಿಸಬೇಕೆಂದು ಸಮಿತಿಯ ಅಧ್ಯಕ್ಷ ವಿಜಯ್ ಡೆನ್ನಿಸ್ ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ.
ಭಾರತದ ಭೂಪ್ರದೇಶದೊಳಗೆ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನಲ್ಲಿ ಸಮಾನ ಹಕ್ಕಿದೆ. ಅದು ಸಮನಾಗಿ ಪರಿಗಣಿಸಲ್ಪಡುತ್ತದೆ. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ರಾಜ್ಯವು ಯಾವುದೇ ನಾಗರಿಕರ ವಿರುದ್ಧ ತಾರತಮ್ಯ ಮಾಡಬಾರದು. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.