ಹರಿಹರ: ಮನೆ ಹಾಗೂ ಆಸ್ತಿ ವಿಚಾರದಲ್ಲಿ ಅಣ್ಣನನ್ನು ತಮ್ಮ ಚಾಕುನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಹರಿಹರದಲ್ಲಿ ನಡೆದಿದೆ.
ಪ್ರಶಾಂತ್ ನಗರದ ನಿವಾಸಿ ಕೆ.ಜಿ ಕುಮಾರ ( 31) ಕೊಲೆಯಾದ ವ್ಯಕ್ತಿ. ಹರಿಹರದ ಗುಂಡಪ್ಪ ಎಂಬುವರಿಗೆ ಇಬ್ಬರು ಪತ್ನಿಯರಿದ್ದು ನಗರದ ಭರಂಪುರ ನಿವಾಸಿ ಎರಡನೇ ಪತ್ನಿ ರತ್ನಮ್ಮನರ ಪುತ್ರ ರಾಜು ಹಾಗೂ ಮಾರುತಿ ಮೊದಲನೇ ಪತ್ನಿ ಲಕ್ಷ್ಮಮ್ಮ ಕೊನೆಯ ಮಗನಾದ ಕುಮಾರ್ ಕೆ.ಜಿ ಅವರೊಂದಿಗೆ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು.
ಇವರಿಬ್ಬರ ಮಧ್ಯೆ ಮನಸ್ತಾಪವಿದ್ದು ಪದೇಪದೇ ಸಣ್ಣಪುಟ್ಟ ಜಗಳ ನಡೆಯುತ್ತಿದ್ದು ನಿನ್ನೆ ರಾತ್ರಿ ದಾವಣಗೆರೆಯಿಂದ ಹರಿಹರಕ್ಕೆ ವಾಪಸ್ ಬರುತ್ತಿರುವ ಮಾರ್ಗ ಮಧ್ಯೆ ಕುಮಾರನ ಮೇಲೆ ತಮ್ಮ ರಾಜು ಮತ್ತು ಮಾರುತಿ ಎಂಬುವವರು ಹಲ್ಲೆ ಮಾಡಿದ್ದಾರೆ. ಕೂಡಲೇ ಕುಮಾರ್ ನನ್ನು ಹರಿಹರ ಆಸ್ಪತ್ರೆಗೆ ಕರೆತರಲಾಗಿತ್ತು.ಈ ವೇಳೆ ಆಸ್ಪತ್ರೆಯಲ್ಲಿಯೇ ಕುಮಾರ್ ಮೇಲೆ ರಾಜು ಹಲ್ಲೆ ನಡೆಸಿ ಚಾಕುವಿನಿಂದ ತಿವಿದಿದ್ದಾರೆ .
ತೀವ್ರವಾಗಿ ರಕ್ತಸಾವಗೊಂಡ ಕುಮಾರ್ ಅವರನ್ನು ದಾವಣಗೆರೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಕುಮಾರ್ ಸಾವನ್ನಪ್ಪಿದ್ದಾರೆ.ಈ ಬಗ್ಗೆ ಕುಮಾರ್ ಪತ್ನಿ ರೇಖಾ ಹರಿಹರ ಠಾಣೆಯಲ್ಲಿ ದೂರು ನೀಡಿದ್ದಾರೆ.ಕೂಡಲೇ ರಾಜು ಹಾಗೂ ಮಾರುತಿಯವರನ್ನು ಪೋಲೀಸರು ಬಂಧಿಸಿದ್ದಾರೆ.
ಘಟನಾಸ್ಥಳಕ್ಕೆ ದಾವಣಗೆರೆ ಉಪವಿಭಾಗ ಅಧೀಕ್ಷಕರಾದ ಎ ಎಸ್ಪಿ ಕನ್ನಿಕಾ ಸಕ್ರಿವಾಲ್, ನಗರಠಾಣೆ ಇನ್ಸ್‌ಪೆಕ್ಟರ್ ದೇವಾನಂದ್ ಟಿ, ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
