ತ್ರಿಪುರಾದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ಬಗ್ಗೆ ಅವಹೇಳನಕಾರಿ ಪದ ಬಳಕೆ: ಮುಸ್ಲಿಂ ಸಮಾಜದಿಂದ ಮೌನ ಪ್ರತಿಭಟನೆ

ದಾವಣಗೆರೆ: ತ್ರಿಪುರಾದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿ ಪದ ಬಳಸಿ, ಮುಸ್ಲಿಮರ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ಶುಕ್ರವಾರ ದಾವಣಗೆರೆ ನಗರದ್ಯಾಂತ ಮುಸ್ಲಿಂ ಸಮುದಾಯದವರು ಮೌನ ಪ್ರತಿಭಟನೆ ನಡೆಸಿದರು.

ಮುಸ್ಲಿಂ ಧರ್ಮೀಯರು ಜಮಾಯಿಸಿ ತಂಜಿಮುಲ್ ಮುಸ್ಲಿಮಿನ್‍ಫಂಡ್ ಅಸೋಸಿಯೇಷನ್, ತಂಜಿಮ್ ಉಲೇಮಾಯೆ ಅಹ್ಲೆ ಸುನ್ನತ್ ಸಂಘಟನೆಗಳ ನೇತೃತ್ವದಲ್ಲಿ ಸಮಾಜದ ಮೌಲಾನಾರ ಸಮ್ಮುಖದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದರು.

ಮುಸ್ಲಿಂ ವ್ಯಾಪಾರಿಗಳು ತಮ್ಮ ವ್ಯಾಪಾರ, ವಹಿವಾಟು, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಬಾಷಾ ನಗರದ ಮಿಲಾದ್ ಮೈದಾನದಲ್ಲಿ ಜಮಾಯಿಸಿ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ತ್ರಿಪುರಾ ಘಟನೆ ಖಂಡಿಸಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಮಾತನಾಡಿ, ಶಾಂತಿ ಸಾಮರಸ್ಯದಿಂದ ಬಾಳುತ್ತಿರುವ ದಾವಣಗೆರೆಯ ಮುಸ್ಲಿಂ ಧರ್ಮೀಯರ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ನಿಯಮಾನುಸಾರ ಕಳಿಸಿ, ಕೊಡುತ್ತೇವೆ ಎಂದು ತಿಳಿಸಿದರು.

ಎಸ್ಪಿ ಸಿ.ಬಿ.ರಿಷ್ಯಂತ್ ಮನವಿ ಸ್ವೀಕರಿಸಿ, ಮಾತನಾಡಿದರು. ಸಮಾಜದ ಗುರುಗಳಾದ ಮೌಲಾನಾ ಮೊಹಮ್ಮದ್ ಹನೀಫ್ ರಜಾ ಖಾದ್ರಿ, ಮೌಲಾನಾ ಶಾಹೀದ್ ರಜಾ, ಮೌಲಾನಾ ಸೈಯದ್ ಮುಕ್ತಿಯಾರ್, ಮೌಲಾನಾ ಮುಫ್ತಿ ಇಲಿಯಾಸ್, ಮೌಲಾನಾ ಶರ್ಫುಲ್ ಹಕ್, ಮುಖಂಡರಾದ ಸೈಯದ್ ಸೈಫುಲ್ಲಾ, ಅಯೂಬ್ ಪೈಲ್ವಾನ್, ಜೆ.ಅಮಾನುಲ್ಲಾ ಖಾನ್, ಸಾದಿಕ್ ಪೈಲ್ವಾನ್, ಸೈಯೀದ್ ಚಾರ್ಲಿ, ರಿಜ್ವಿ ಖಾನ್, ಸಿರಾಜ್ ಅಹಮ್ಮದ್, ಸಿ.ಆರ್.ನಸೀರ್ ಅಹಮ್ಮದ, ಅಬ್ದುಲ್ ಘನಿ ತಾಹೀರ್, ಎ.ಬಿ.ರಹೀಂ, ಕೆ.ಚಮನ್ ಸಾಬ್, ಜಾಕೀರ್ ಅಲಿ, ಸೈಯದ್ ಅಲ್ತಾಫ್, ಕಬೀರ್ ಅಲಿ, ಯು.ಎಂ.ಮನ್ಸೂರ್ ಅಲಿ, ಖಾದರ್ ಬಾಷಾ, ಸೈಯದ್ ನೌಶಾದ್ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!