ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತರಬೇತಿ ಪ್ರಮಾಣ ಪತ್ರ ಪಡೆಯಬೇಕು
ದಾವಣಗೆರೆ :ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೆಂಗಳೂರು ಇವರ ಆದೇಶದ ಮೇರೆಗೆ ಜಿಲ್ಲೆಯ ಎಲ್ಲ ಆಹಾರ ತಯಾರಕರು ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿಗಳಿಂದ ಅಧಿಕೃತ ಆದೇಶದಂತೆ ಉದ್ಯಮದಾರರು ತರಬೇತಿ ವೆಚ್ಚವನ್ನು ಭರಿಸಿ ಕಡ್ಡಾಯವಾಗಿ ಎಲ್ಲರೂ ತರಬೇತಿ ಪಡೆದುಕೊಂಡು ಪ್ರಮಾಣ ಪತ್ರ ಪಡೆಯಬೇಕೆಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.ಪ್ರಾಧಿಕಾರದಿಂದ ಅಧಿಕೃತ ಮಾನ್ಯತೆ ಪಡೆದ ಗ್ಲೋಬಲ್ ಇನ್ಸ್ಟ್ಯೂಟ್ ರ್ಾ ಎಜುಕೇಷನ್ ಅಂಡ್ ರಿಸರ್ಚ್ ಪೌಂಡೇಷನ್ ದಾವಣಗೆರೆ ಇವರು ಎಲ್ಲ ಆಹಾರ ತಯಾರಿಕಾ ಉದ್ಯಮದಾರರಿಗೆ ತರಭೇತಿ ನೀಡಿ ಪ್ರಮಾಣ ಪತ್ರ ನೀಡುತ್ತಿದ್ದು, ಈ ಸಂಸ್ತೆಯೊಅದಿಗೆ ಎಲ್ಲರೂ ಸಹಕರಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕ ಸೋಮಶೇರ್ಖ ಅರಸ್ ಅವರನ್ನು ಖುದ್ದು ಅಥವಾ ದೂರವಾಣಿ 7411535158 ಅಥವಾ 9731070191 ಗೆ ಸಂಪರ್ಕಿಸಬಹುದು.