ಮೈಲಾರ ಕಾರ್ಣೀಕ `ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್’
ಹೂವಿನಹಡಗಲಿ: ತಾಲ್ಲೂಕಿನ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯ ವಾರ್ಷಿಕ ಕಾರ್ಣೀಕ ನುಡಿಯು `ಅಂಬಲಿ ಹಳ ಸಿತು ಕಂಬಳಿ ಬೀಸಿ ತಲೆ ಪರಾಕ್’ ಎಂದಾಗಿದೆ.
ಕಾರ್ಣೀಕ ನುಡಿ ಕೇಳುತ್ತಿದ್ದಂತೆ ಜನರು ತಮ್ಮದೇ ಆದ ವಿಶ್ಲೇಷಣೆಯಲ್ಲಿ ನಿರತರಾಗಿದ್ದರು. ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದೂರವಾಗಿ ನೂತನವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಜನರು ಕಾರ್ಣೀಕ ನುಡಿಯನ್ನು ವಿಶ್ಲೇಷಿಸುತ್ತಿದ್ದುದು ಕಂಡು ಬಂದಿದೆ.
ಪ್ರಸ್ತುತ ಕಾರ್ಣಿಕದ ನುಡಿ ಕುರಿತು ನಾನಾ ವಿಶ್ಲೇಷಣೆಗಳು ಕೇಳಿ ಬಂದವು. ಈ ಬಾರಿ ಮಳೆ ಹೆಚ್ಚಾಗಿ ಸಮೃದ್ಧ ಬೆಳೆ ಬಂದು ಕೊನೆ ಗಳಿಗೆಯಲ್ಲಿ ಹಾನಿಯಾಗುವ ಸಾಧ್ಯತೆ ಹೆಚ್ಚು. ಜತೆಗೆ ರಾಜಕೀಯವಾಗಿಯೂ ಒಂದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿ ಅಧಿಕಾರ ಹಿಡಿಯುವ ಲಕ್ಷಣಗಳಿವೆ ಎಂದು ನೆರೆದಿದ್ದ ಭಕ್ತ ಸಮೂಹ ನಾನಾ ರೀತಿಯ ವಿಶ್ಲೇಷಣೆ ಕೇಳಿ ಬರುತ್ತಿವೆ..