ಮೈಸೂರಲ್ಲಿ ರೇಪ್ ಆದ್ರೆ.! ನನ್ನ್ಯಾಕೆ ಕೇಳ್ತೀರಾ.? ನಾನೇನು ನೋಡಿದೀನಾ.! ಮಾಡಿದೀನಾ.!? ಹೇಳಿ.! ಸಂಸದ ಜಿಎಂ ಸಿದ್ದೇಶ್ವರ ಹಾರಿಕೆ ಉತ್ತರ
ದಾವಣಗೆರೆ: ಮೈಸೂರಲ್ಲಿ ರೇಪ್ ಆಗಿದೆಯಾ? ಯಾವಾಗ? ಆ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ. ನನ್ನನ್ನೇನು ಕೇಳಬೇಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಉಡಾಫೆ ಉತ್ತರ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಲ್ಲಿ ರೇಪ್ ಆದ್ರೆ, ನನ್ನ್ಯಾಕೆ ಕೇಳ್ತೀರಾ? ನಾನೇನು ನೋಡಿದೀನಾ, ಮಾಡಿದೀನಾ ಹೇಳಿ ಎಂದು ಜನಪ್ರತಿನಿಧಿ ಎಂಬುವ ಜವಾಬ್ದಾರಿ ಮರೆತು ಸಿದ್ದೇಶ್ವರ್ ಹಾರಿಕೆ ಉತ್ತರ ನೀಡಿದ್ದಾರೆ.
ಮೈಸೂರಲ್ಲಿ ಆಗಿರುವ ಘಟನೆಯ ಬಗ್ಗೆ ನನಗೇನು ಗೊತ್ತಿರಲು ಸಾಧ್ಯ. ಬೆಳಗ್ಗೆಯಿಂದ ರಾತ್ರಿಯವರೆಗೂ ನಾವು ಕೆಲಸ ಮಾಡುತ್ತಾ ಬ್ಯುಸಿಯಾಗಿರುತ್ತೇವೆ. ಮನೆ ಸೇರೋದೆ ರಾತ್ರಿ 11 ರ ನಂತರ ಈ ಮಧ್ಯೆ ಪತ್ರಿಕೆ ಓದಲು ಸಹ ಸಮಯ ಇರುವುದಿಲ್ಲ. ನೀವಂತೂ ಅದೇ ಬದುಕು ಮಾಡ್ತೀರಿ ನಿಮಗೆ ಗೊತ್ತಿರುತ್ತೆ ಎಂದು ಸುದ್ದಿಗಾರರಿಗೆ ಕುಟುಕಿದ್ದಾರೆ.
ನನಗೆ ಮೈಸೂರಲ್ಲಿ ಆಗಿರುವ ಅತ್ಯಾಚಾರದ ಬಗ್ಗೆ ಗೊತ್ತಿಲ್ಲ. ಮಾಧ್ಯಮದವರು ಬಿತ್ತರಿಸುತ್ತೀರುವುದನ್ನು ನಾನು ನೋಡಿಲ್ಲ. ರೇಪ್ ಬಗ್ಗೆ ಕೇಳಬೇಡಿ. ಬೇರೆ ಏನಾದರೂ ಇದ್ದರೆ ಬೇಕಿದ್ದರೆ ಕೇಳಿ ಉತ್ತರಿಸುತ್ತೇನೆ ಎಂದರು.