ಮೈಸೂರಿನಲ್ಲಿ ನಕಲಿ ‘ನಂದಿನಿ’ ತುಪ್ಪ ಮಾರಾಟ ಜಾಲ ಪತ್ತೆ.! ಜೆ ಡಿ ಎಸ್ ಕಾರ್ಯದ್ಯಕ್ಷರಿಂದ ವಂಚನೆ ಬಯಲಾಗಿದ್ದು ಹೇಗೆ ಗೊತ್ತಾ.!?
ಮೈಸೂರು: ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಗೂ ಜನತೆಗೆ ಕಲಬೆರಕೆಯಲ್ಲದ ಶುದ್ಧ ಹಾಲು, ತುಪ್ಪ, ಮೊಸರುಗಳನ್ನು ಕೊಡಬೇಕೆಂಬ ಸುದುದ್ದೇಶದಿಂದ ನಿರ್ಮಾಣವಾದ ನಂದಿನಿ ಉತ್ಪನ್ನಗಳು ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗಿದ್ದು, ಇದೀಗ ’ನಂದಿನಿ’ ಹೆಸರಲ್ಲೀ ಕೂಡ ವಂಚಕರು ಕಲಬೆರಕೆ ಉತ್ಪನ್ನಗಳನ್ನು ತಯಾರಿಸಿ ಹಣ ಮಾಡುತ್ತಿದ್ದಾರೆ!
ಇಂತಹ ಜಾಲವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪತ್ತೆಯಾಗಿದ್ದು, ನಕಲಿ ನಂದಿನಿ ತುಪ್ಪವನ್ನು ತಯಾರಿಸುವ ಗೋಡೌನ್ ನಗರದ ಹೊರವಲಯದಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಕೆ ಎಂ ಎಫ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಕಲಿ ನಂದಿನಿ ತುಪ್ಪ ತಯಾರಿಕಾ ಗೋಡೌನ್ ಮೇಲೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದ್ದು, ಭಾರೀ ಪ್ರಮಾಣದಲ್ಲಿ ನಕಲಿ ತುಪ್ಪವನ್ನು ತಯಾರಿಸಿ ಮೈಸೂರು ನಗರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದೆ.
ನಂದಿನಿ ಹೆಸರಲ್ಲಿ ಕಲಬೆರಕೆ ತುಪ್ಪ ಮಾರಾಟ ನಾಡುತ್ತಿರುವ ಬಗ್ಗೆ ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಶಾಂತ ಎನ್ನುವವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಹೊಸಹುಂಡಿಯಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಲಾಗಿತ್ತು. ಈ ಘಟಕದಲ್ಲಿ ಡಾಲ್ಡಾ ತುಪ್ಪವನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಿ ಗೋಡೋನ್ನಲ್ಲಿ ಶೇಖರಿಸಿಡಲಾಗುತ್ತಿತ್ತು. ನಂದಿನಿ ತುಪ್ಪದಂತೆ ಕಾಣಲು ಅದಕ್ಕೆ ಡಾಲ್ಡಾ ತುಪ್ಪವನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು ಎಂಬುದು ದಾಳಿ ನಡೆಸಿದ ವೇಳೆ ತಿಳಿದು ಬಂದಿದೆ.
ನಕಲಿ ನಂದಿನಿ ತುಪ್ಪ ತಯಾರಿಸಿ ಲೋಡ್ ಮಾಡಿ ಮೈಸೂರು ನಗರದಾದ್ಯಂತ ವಿತರಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೊಸಹುಂಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಹೊಸಹುಂಡಿಯಲ್ಲಿ ಈ ದಂದೆ ನಡೆಯುತ್ತಿದ್ದು, ಇದೀಗ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪವನ್ನು ಮಾರಟ ಮಾಡುತ್ತಿದ್ದ ಜಾಲ ಪೊಲೀಸರ ಬಲೆಗೆ ಬಿದ್ದಿದೆ.
ರಾಜ್ಯದಲ್ಲಿ ನಕಲಿ ತುಪ್ಪ ಮಾರಾಟ ಮಾಡುವ ಜಾಲ ಹೆಚ್ಚಾಗಿದೆ. ಬ್ರಾಂಡ್ಗಳ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡಿ ಹಣ ಮಾಡುವ ದಂಧೆ ರಾಜ್ಯದ ಹಲೆವೆಡೆ ತೆಲೆ ಎತ್ತಿವೆ. ಇದೀಗ ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರುವುದು ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ.