ಮೈಸೂರು ಗ್ಯಾಂಗ್ ರೇಪ್: ನೆರೆ ರಾಜ್ಯದಲ್ಲಿ 5 ಜನ ಕೀಚಕರ ಬಂಧನ
ಮೈಸೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ಕೀಚಕ ಪಡೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 24 ರ ರಾತ್ರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಘಟನೆ ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕೃತ್ಯ ನಡೆಸಿದ ಕೀಚಕರ ಹೆಜ್ಜೆ ಗುರುತು ಬೆನ್ನತ್ತಿದ ಪೊಲೀಸರು ಮೂರು ದಿನದಲ್ಲಿ ಆರೋಪಿತರನ್ನ ಸೆರೆಹಿಡಿದಿದ್ದಾರೆ.
ಅತ್ಯಾಚಾರಿಗಳು ತಮ್ಮ ಪರೀಕ್ಷೆ ನಡೆಯುತ್ತಿದ್ದರೂ ಪರೀಕ್ಷೆಗೆ ಹಾಜರಾಗದೇ ಆರೋಪಿಗಳು ತಮಿಳುನಾಡು ಹಾಗೂ ಕೇರಳದಲ್ಲಿ ತಲೆಮರೆಸಿಕೊಂಡಿದ್ದರು. ಪೊಲೀಸರ ತೀವ್ರ ಶೋಧದ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಪ್ರಕರಣದಲ್ಲಿ 5 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸಾಕ್ಷ್ಯ ದೊರಕಿದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ. ಈವರೆಗೆ ಪ್ರಕರಣದಲ್ಲಿ 25 ಕ್ಕೂ ಅಧಿಕ ಮಂದಿಯನ್ನ ವಿಚಾರಣೆ ನಡೆಸಲಾಗಿತ್ತು. ಮೈಸೂರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್‌ರೇಪ್ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.