ಮೈಸೂರ್ ರೇಪ್ ಪ್ರಕರಣ ಭೇದಿಸಿ, ಆರೋಪಿಗಳ ಪತ್ತೆ ಮಾಡಿದ ಸೂಪರ್ ಪೊಲೀಸ್

IMG-20210829-WA0008

 

ಮೈಸೂರು: ಪ್ರಸ್ತುತ ದಿನದಲ್ಲಿ ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಮೈಸೂರಿನ ಚಾಮುಂಡಿಬೆಟ್ಟದ ಪಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಹೊರವಲಯದಲ್ಲಿ ಘಟನೆ ನಡೆದ ಲಲಿತಾದ್ರಿಪುರ ಬಡಾವಣೆ ನಿರ್ಜನ ಪ್ರದೇಶದಲ್ಲಿ ಸಿಕ್ಕಿದ ವೈಜ್ಞಾನಿಕ ಸಾಕ್ಷ ಹಾಗು ಟೆಕ್ನಿಕಲ್ ಎವಿಡೆನ್ಸ್ ಮೂಲದ ಕಾರ್ಯಾಚರಣೆಗಳಿಗೆ ಪೊಲೀಸರು ಘಟನೆಯ 82 ಗಂಟೆಗಳಲ್ಲಿ ಐವರನ್ನು ಬಂಧಿಸಿದ್ದಾರೆ. ಇಷ್ಟೆಲ್ಲಾ ಸಾಧ್ಯವಾದದ್ದು ಮೈಸೂರು ಗ್ರಾಮಾಂತರ ಹಾಗೂ ದಕ್ಷಿಣ ವಲಯ ಪೊಲೀಸರ ಸಾಹಸದಿಂದ.

ಈ ಸಾಹಸಕ್ಕೆ ಮುಂದಾಗಿ ಆಪರೇಷನ್ ಸಕ್ಸಸ್ ಮಾಡಿದ ಟೀಮ್ ಯಾವುದು, ಆ ಸೂಪರ್ ಪೊಲೀಸ್ ಗಳ ವಿವರ ಇಲ್ಲಿದೆ ನೋಡಿ. ಈ ಸೂಪರ್ ಕಾಪ್ ತಂಡದಲ್ಲಿ ಎಸಿಪಿ ಶಿವಶಂಕರ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀಕಾಂತ್, ಮಹದೇವಸ್ವಾಮಿ, ಪ್ರಕಾಶ್, ಅಜರುದ್ದೀನ್, ಸಹಾಯಕರಾದ ಅನಿಲ್ ಮತ್ತು ಅಲೆಕ್ಸ್, ಹೆಡ್ ಕಾನ್ ಸ್ಟೇಬಲ್ ರಮೇಶ್ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಜೀವನ, ಗಿರಿಶ,ಸಾಗರ ಸಿಬ್ಬಂದಿ ಮಂಜುನಾಥ್, ಕಿಶೋರ್ ಹಾಗೂ ಲತೀಫ್ ತಂಡದಲ್ಲಿ ಇದ್ದರು

Leave a Reply

Your email address will not be published. Required fields are marked *

error: Content is protected !!