ಎನ್. ಟಿ. ಎರ್ರಿಸ್ವಾಮಿ ರಚಿತ ಮಕ್ಕಳ ಮನೋಲ್ಲಾಸ ಪುಸ್ತಕ ಲೋಕಾರ್ಪಣೆ ಸಮಾರಂಭ
ದಾವಣಗೆರೆ : ಎನ್. ಟಿ. ಎರ್ರಿಸ್ವಾಮಿ ರಚಿಸಿರುವ ಮಕ್ಕಳ ಮನೋಲ್ಲಾಸ ಪುಸ್ತಕ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮ ಮಾರ್ಚ್, 3ರ ಬುಧವಾರ ಧಾರವಾಡದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾದ್ಯಾಪಕ ಡಾ. ಹೆಚ್. ವೈ. ಪ್ರಶಾಂತ ಪ್ರಾಸ್ತವಿಕ ನುಡಿಯಾಡಲಿದ್ದಾರೆ. ಎರ್ರಿಸ್ವಾಮಿ ಅವರ ಹಿರಿಯ ಮೊಮ್ಮಗ ಜಿ. ವಿ. ಕಿಶನ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಡಾ. ಜಿ. ಎಸ್. ವೇಣುಮಾಧವ ಅಧ್ಯಕ್ಷತೆ ವಹಿಸಲಿದ್ದಾರೆ. ನಿಂಗಪ್ಪ ಮುದೇನೂರು ಕೃತಿ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಶಿವಪ್ಪ ಉಪಸ್ಥಿತರಿರುವರು.