ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಮೂವರು ಆರೋಪಿಗಳ ಬಂಧನ: 4 ಲಕ್ಷ ರೂ ನಗದು, 1 ಕೆಜಿ ನಕಲಿ ಬಂಗಾರ ವಶ

IMG-20210913-WA0013

 

ದಾವಣಗೆರೆ: ನಕಲಿ‌ ಚಿನ್ನದ ನಾಣ್ಯಗಳನ್ನು ನೀಡಿ ಹಣ ದೋಚಿದ್ದ ಮೂವರು ಆರೋಪಿಗಳನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದು, ಆರೋಪಿತರಿಂದ 4 ಲಕ್ಷ ರೂ., ನಗದು, ಮತ್ತು 1 ಕೆಜಿ ನಕಲಿ ಬಂಗಾರದ ಬಿಲ್ಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಹೊನ್ನಾಳಿಯ ನರಪತ್ ಎಂಬುವವರಿಗೆ ದಾವಣಗೆರೆಯಲ್ಲಿ ಪೈಪ್ ಲೈನ್ ಕೆಲಸ ಮಾಡುವಾಗ ಬಂಗಾರದ ನಾಣ್ಯಗಳು ಸಿಕ್ಕಿದ್ದು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ 5 ಲಕ್ಷ ಪಡೆದು ಪಂಗನಾಮ‌ ಹಾಕಿದ್ದರು.

ಮೋಸಕ್ಕೊಳಗಾದ ವ್ಯಕ್ತಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಟಿಜೆ ಪೊಲೀಸ್ ಪಿಎಸ್‌ಐ ಅಬ್ದುಲ್ ಖಾದರ್ ಜಿಲಾನಿ ಹಾಗೂ ಸಿಬ್ಬಂದಿಯನ್ನೊಳಗೊಂಡ ಪೊಲೀಸ್ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಮೂವರು‌ ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Leave a Reply

Your email address will not be published. Required fields are marked *

error: Content is protected !!