ದಾವಣಗೆರೆ: ಕಾಂಗ್ರೆಸ್ ಪಕ್ಷವು ತನ್ನ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕುತೂಹಲ ಕೆರಳಿಸಿದ್ದ ಹರಿಹರ ಕ್ಷೇತ್ರದಲ್ಲಿ ನಂದಿಗಾವಿ ಶ್ರೀನಿವಾಸ್‌ಗೆ ಟಿಕೆಟ್ ನೀಡಲಾಗಿದೆ.
ಹರಿಹರದ ಹಾಲಿ ಕಾಂಗ್ರೆಸ್ ಶಾಸಕ ಎಸ್ ರಾಮಪ್ಪ ನವರಿಗೆ ಕೈ ಕೊಟ್ಟು ನಂದಿಗಾವಿ ಶ್ರೀನಿವಾಸ್ ಟಿಕೆಟ್ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇತ್ತೀಚೆಗೆ ರಾಮಪ್ಪ ಸಿದ್ದರಾಮಯ್ಯ ರನ್ನ ಬೇಟಿ ಮಾಡಿದ್ದ ಸಂದರ್ಭದಲ್ಲಿ ನನಗೆ ಕೆಲವರು ಅಡ್ಡಗಾಲು ಹಾಕಿದ್ದಾರೆ ಎಂದಿದ್ದರು, ಇಂದು ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿ ಬರಿಗೈಯಲ್ಲಿ ವಾಪಸ್ ಬಂದಿದ್ದರು.
ಹರಿಹರದಲ್ಲಿ ರಾಮಪ್ಪ ಅಭಿಮಾನಿಗಳು ನೇರವಾಗಿ ಕಾಗಿನೆಲೆ ಸ್ವಾಮೀಜಿ ವಿರುದ್ದ ಹರಿಹಾಯ್ದಿದ್ದರು. ಹಾಲಿ ಶಾಸಕರಿಗೆ ಟಿಕೇಟ್ ತಪ್ಪಿಸಲು ಕಾಗಿನೆಲೆ ಸ್ವಾಮೀಜಿ ಕಾರಣ ಎಂದು ಆರೋಪಿಸಿದ್ದರು.
ಶಾಸಕರ ಮುಂದಿನ ನಡೆ ಏನೆಂಬುದನ್ನು ಖುದ್ದು ರಾಮಪ್ಪನವರು ತಮ್ಮ ಕಾರ್ಯಕರ್ತರಿಗೆ ತಿಳಿಸಲಿದ್ದಾರೆ ಎಂದು ತಿಳಿದುಬಂದಿದೆ.
