ನಾನು 6 ತಿಂಗಳು ಜೈಲಿನಲ್ಲಿದ್ದೆ: ಒಂದು ಬೀಡಿಯ ಬೆಲೆ ಎಷ್ಟು ಅಂತಾ ನನಗೆ ಗೊತ್ತು – ಸಚಿವ ಅರಗ ಜ್ಞಾನೇಂದ್ರ
ಚಿಕ್ಕಮಗಳೂರು: ನಾನು ಖೈದಿಯಾಗಿ ಜೈಲಲ್ಲಿ ಇದ್ದವನು . 1975 ರಲ್ಲಿ ಎಮರ್ಜೆನ್ಸಿ ಟೈಮಲ್ಲಿ ಆರು ತಿಂಗಳು ಜೈಲಿನಲ್ಲಿ ಇದ್ದೆ . ಜೈಲಲ್ಲಿ ಏನಿರುತ್ತೆ ? ಏನಿರಲ್ಲ ? ಹೊರಗಿನಿಂದ ಒಂದು ಬೀಡಿ ತರಿಸಿಕೊಳ್ಳಲು ಎಷ್ಟು ಹಣ ನೀಡಬೇಕಿತ್ತು ಎಲ್ಲಾ ನನಗೆ ಗೊತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ .
ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆಯಲ್ಲಿ ಮಾತನಾಡಿದ ಅವರು ,
ಜೈಲಿನಲ್ಲಿ ಊಟ ಸರಿ ಇರಲ್ಲ . ಕೆಮಿಕಲ್ ಹಾಕಿ ಕೊಡುತ್ತಾರೆ ಎಂದು ಖೈದಿಯೊಬ್ಬ ಬರಿದಿದ್ದಾರೆ ಎನ್ನಲಾದ ಪತ್ರದ ಸಂಬಂಧ ಮಾತನಾಡಿದ್ದಾರೆ . ಖೈದಿಯೇ ಬರೆದಿದ್ದಾರೋ ಅಥವಾ ಯಾರು ಬರೆದಿದ್ದಾರೋ ಗೊತ್ತಿಲ್ಲ . ಆದರೆ ನನ್ನ ಫೋನಿಗೂ ಬಂದಿದೆ . ನಾನು ಪರಪ್ಪನ ಅಗ್ರಹಾರ ಜೈಲಿಗೆ ಸಂದರ್ಶನ ಮಾಡಲು ಹೋಗಿದ್ದೆ . ಸುಮಾರು ಎರಡು – ಮೂರು ಗಂಟೆ ಇಡೀ ಜೈಲು ಸುತ್ತಿದ್ದೇನೆ . ಅಲ್ಲಿರುವವರ ಜೊತೆ ಮಾತನಾಡಿದ್ದೇನೆ . ಎಲ್ಲಾ 100ಕ್ಕೆ 100 ಪರ್ಸೆಂಟ್ ಎಂದು ನಾನು ಹೇಳಲ್ಲ . ಸಣ್ಣಪುಟ್ಟ ಹಲವು ಲೋಪದೋಷಗಳು ಇದೆ. ಅಧಿಕಾರಿಗಳ ಜೊತೆ ಚರ್ಚಿಸಿ ಎಚ್ಚರಿಸಿ ಬಂದಿದ್ದೇನೆ ಎಂದರು .
ಎಮರ್ಜೆನ್ಸಿ ವೇಳೆ ಆರು ತಿಂಗಳು ನಾನು ಖೈದಿಯಾಗಿ ಜೈಲಲ್ಲಿ ಇದ್ದೆ . ನಾನು , ಜೆ.ಎಚ್.ಪಟೇಲ್ , ಡಿ.ಎಚ್.ಶಂಕರಮೂರ್ತಿ ಎಲ್ಲರೂ ಜೈಲಲ್ಲೇ ಇದ್ದೆವು ಎಂದು ತಮ್ಮ ಜೈಲುವಾಸದ ಅನುಭವವನ್ನ ಬಿಚ್ಚಿಟ್ಟಿದ್ದಾರೆ .