22ರಂದು ಸೇತುವೆ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ತಡೆ

ದಾವಣಗೆರೆ:ರಾಷ್ಟ್ರೀಯ ಹೆದ್ದಾರಿ -4 ರಲ್ಲಿ ಬರುವ ಮಲ್ಲಶೆಟ್ಟಿಹಳ್ಳಿಯಿಂದ ಹೊಸದುರ್ಗದಿಂದ ಹುಳಿಯೂರು ರಸ್ತೆಗೆ ಹೊಂದಿಕೊಂಡಂತಹ ಹಳ್ಳಿಗಳ ಬಳಿ ಸೇತುವೆ ನಿರ್ಮಾಣ ಮಾಡಬೇಕೆಂದು ಅಗ್ರಹಿಸಿ ಇದೆ 22 ರಂದು ಹೆದ್ದಾರಿ ತಡೆ ನೆಡಿಸಿ ಪ್ರತಿಭಟಿಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಅಧ್ಯಕ್ಷಮಲ್ಲ ಶೆಟ್ಟಿಯಲ್ಲಿ ಚನಬಸಪ್ಪ ತಿಳಿಸಿದರು.
ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಮಲ್ಲಶೆಟ್ಟಿಹಳ್ಳಿ , ಕರಿಲಕ್ಕೇನಹಳ್ಳಿ , ಬುಳ್ಳಾಪುರ , ಈಚಘಟ್ಟ , ದೊಡ್ಡರಂಗವ್ವನಹಳ್ಳಿ , ಜಂಪೇನಹಳ್ಳಿ , ಸುಲ್ತಾನಿಪುರ , ಕಟ್ಟೂರು , ಕೊಡಗನೂರು , ಬೊಮ್ಮೇನಹಳ್ಳಿ , ಹನುಮನಹಳ್ಳಿ , ಈ ಹಳ್ಳಿಗಳಿಗೆ ಸೇರಿರುವ ಎಲ್ಲಾ ಗ್ರಾಮಸ್ಥರು , ಒಗ್ಗೂಡಿಕೊಂಡು ಈ ರಸ್ತೆಯ ಸೇತುವೆ ಕಾಮಗಾರಿ ಮಾಡದ ಮತ್ತು ಮಾತು ತಪ್ಪಿದ ಶಾಸಕರು , ಸಚಿವರುಗಳು , ಎಂ.ಪಿ , ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಸುಮಾರು 15-20 ಜನ ಹೆದ್ದಾರಿ ದಾಟುವಾಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುತ್ತಾರೆ . ಇಷ್ಟು ಜನ ಪ್ರಾಣ ಕಳೆದುಕೊಂಡರೂ ರಾಜ್ಯ ರಾಜ್ಯ ಸರ್ಕಾರವಾಗಲೀ , ಕೇಂದ್ರ ಸರ್ಕಾರವಾಗಲಿ , ಜಿಲ್ಲಾಡಳಿತವಾಗಲಿ , ಎಂ.ಪಿ. , ಶಾಸಕರು , ಸಚಿವರುಗಳಾಗಲೀ ಈ ಸೇತುವೆ ನಿರ್ಮಾಣ ಮಾಡಲು ಹಲವಾರು ಬಾರಿ ಈ ಭಾಗದ ರೈತರು ಮನವಿ ಕೊಟ್ಟರೂ ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ಸುಳ್ಳು ಭರವಸೆಯನ್ನು ಜಿಲ್ಲಾಧಿಕಾರಿಗಳು ಕೊಟ್ಟಿರುತ್ತಾರೆ . ಕಾರಣ ಕರ್ನಾಟಕ ರಾಜ್ಯ ರೈತ ಕೋಡಿಹಳ್ಳಿ ಚಂದ್ರಶೇಖರ್ ಬಣ , ಪುಟ್ಟಣ್ಣಯ್ಯ ಬಣ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲಾಗುವುದು. ಈ ಚಳುವಳಿಯಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಎಂ.ಪಿ. ಶಾಸಕರು , ಸಚಿವರುಗಳು ಜಿಲ್ಲಾಧಿಕಾರಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಎಂದರು
ಮಲ್ಲಶೆಟ್ಟಿಹಳ್ಳಿ ಗ್ರಾಮ ಮತ್ತು ಸುತ್ತಮುತ್ತ ಹತ್ತಾರು ಗ್ರಾಮಗಳಿಗೆ ಸಾರ್ವಜನಿಕರ ಸಂಚಾರಕ್ಕೆ , ವಾಹನಗಳು ಸಂಚರಿಸಲು ಮತ್ತು ವ್ಯವಹಾರಕ್ಕೆ ಅನುಕೂಲವಾಗುವಂತೆ ಉತ್ತಮವಾದ ಅಂಡರ್‌ಬ್ರಿಡ್ಜ್ ಸೌಲಭ್ಯ ಇಲ್ಲ .ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ .
ಈ ಹಿಂದೆ ಈ ವಿಚಾರವಾಗಿ ಹೆದ್ದಾರಿ ತಡೆ ನಡೆಸಿದಾಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಮತ್ತು ಮಾಯಕೊಂಡ ಕ್ಷೇತ್ರದ ಶಾಸಕರು ಅತೀ ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು ಆದರೆ ಇದುವರೆಗೂ ಸುಮಾರು ಒಂದೂವರೆ ವರ್ಷ ಕಳೆದರೂ ಕೆಳ ಸೇತುವೆ ಕಾಮಗಾರಿಗೆ ಚಾಲನೆ ನೀಡಿಲ್ಲ
ಎಂದು ಆರೋಪಿಸಿದ್ದರು .
ಪತ್ರಿಕಾಗೋಷ್ಠಿಯಲ್ಲಿ ಚಿನ್ನಸಮುದ್ರ ಶೇಖರ್ ನಾಯಕ್,ಹನುಮಂತಪ್ಪ,ಕರಿಬಸಪ್ಪ,ಮಲ್ಲ ಶೆಟ್ಟಿಹಳ್ಳಿ ಹನುಮೇಶ್,ದಾಗಿನಕಟ್ಟೆ ಬಸವರಾಜ್,ಬುಳ್ಳಾಪುರ ಹನುಮಂತಪ್ಪ,ಪರಮೇಶ್ವರಪ್ಪ,ಎಂಜಿ ನಾಗರಾಜ್,ಮತ್ತಿತರರು ಇದ್ದರು,