ಮಾನವನ ಅಂತರಂಗದ ಶುದ್ದೀಕರಣಕ್ಕೆ ಸಹಜ ಶಿವಯೋಗ ಸಹಕಾರಿ – ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು
ಹಾವೇರಿ : ಮಾನವನ ಅಂತರಂಗದ ಶುದ್ದೀಕರಣಕ್ಕೆ ಸಹಜ ಶಿವಯೋಗ ಸಹಕಾರಿಯಾಗಲಿದೆ ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶೂನ್ಯ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಶ್ರೀ ಹೊಸಮಠದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವ 2021 ರ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರಿಗೂ ಜಗದ್ಗುರುಗಳು ಬಸವಣ್ಣನವರು. ಬಸವಣ್ಣನವರ ತತ್ವ ಸಿದ್ದಾಂತಗಳು ಸರ್ವಕಾಲಿಕವಾಗಿವೆ. ಅಂತರಂಗದ ಶುದ್ಧೀಕರಣ ಆಗಬೇಕಾದರೆ ಸಹಜ ಶಿವಯೋಗವನ್ನು ಎಲ್ಲರೂ ಮಾಡಲು ಸಾಧ್ಯವಾಗಬೇಕು.ಗುರು ಶಿಷ್ಯರ ಸಂಬಂಧ ಅನನ್ಯ ಹಾಗೂ ಅದ್ಬುತವಾಗಿದೆ. ಗುರುಗಳ ಆರ್ಶಿವಾದ ಹಾಗೂ ಮಾರ್ಗದರ್ಶನದಿಂದ ಏನೆಲ್ಲಾ ಸಾಧನೆ ಮಾಡಲು ಸಾಧ್ಯ. ಮನ ಹಾಗೂ ಆಲೋಚನೆ ಶುದ್ಧೀಕರಣಕ್ಕೆ ಸಹಜ ಶಿವಯೋಗ ಅಗತ್ಯವಾಗಿದೆ. ನಮ್ಮ ಜೀವನ ನಮ್ಮ ಕೈಯಲ್ಲಿಯೇ ಇದೆ.ನಮ್ಮ ಜೀವನದ ನಿರ್ಮಾತೃಗಳು ನಾವೇ ಆಗಿದ್ದೇವೆ.ದ್ವೇಷ ಹಾಗೂ ಮೊಸ ಮನುಷ್ಯನನ್ನು ಕೆಡಿಸುತ್ತೇವೆ.
ಆಧ್ಯಾತ್ಮಿಕ ಜೀವನ ನಡೆಸುವುದು ಇಂದಿನ ಕಾಲಕ್ಕೆ ಮುಖ್ಯವಾಗಿದೆ ಎಂದು ಸಹಜ ಶಿವಯೋಗದ ಮಹತ್ವದ ಬಗ್ಗೆ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಇದೇ ಅವಧಿಯಲ್ಲಿ ಶ್ರೀಗಳು ಸಹಜ ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಭಕ್ತಾದಿಗಳಿಗೆ ಮಾಡಿಸಿದರು. ಈ ಸಂದರ್ಭದಲ್ಲಿ ಗೊಣಿಕೊಪ್ಪದ ಶ್ರೀ ಮಹಾಂತ ಸ್ವಾಮಿಗಳು. ರಾಣೆಬೆನ್ನೂರಿನ ಶ್ರೀ ಗುರುಬಸವ ಸ್ವಾಮಿಗಳು.ಇಮ್ಮಡಿ ಸ್ವಾಮಿಗಳು.
ದಾವಣಗೆರಿಯ ಬಸವಪ್ರಭು ಸ್ವಾಮಿಗಳು.ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು,ಮಹಾಸಭಾದ ಕ.ರಾ ಯುವ ಘಟಕದ ರಾಜ್ಯಾಧ್ಯಕ್ಷರಾದ ಬಿ ಮನೋಹರ ಅಬ್ಬಿಗೇರಿ.ಭೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷರಾದ ರವಿ ಕೆ ಪೂಜಾರ.ಈಶ್ವರ ಸಾಣಿಕೊಪ್ಪ.ಡಾ. ಉಮೇಶ ಹಿರೇಮಠ. ನಾಗೇಂದ್ರ ಕಡಕೋಳ.ಪರಮೇಶಪ್ಪ ಮೇಗಲಮನಿ ಸೇರಿದಂತೆ ಉತ್ಸವ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.