ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿರುವ ರೈತರಿಗೆ ಗ್ರೀನ್ ವೋಚರ್ ನೀಡಿಲ್ಲ. ಗ್ರೀನ್ ವೋಚರ್ ನೀಡಿದ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಆರೋಪಿಸಿರುವ ಜಗಳೂರು ತಾಲ್ಲೂಕು ರೈತರು, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ಸರ್ಕಾರಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲಾಗಿದ್ದು, 547 ರೈತರಿಂದ 15-20 ಕ್ವಿಂಟಾಲ್ ರಾಗಿ ಪಡೆದು 2 ತಿಂಗಳುಗಳಾದರೂ ಗ್ರೀನ್ ವೋಚರ್ ನೀಡಿಲ್ಲ. ಯಾವ ಅಧಿಕಾರಿಗಳೂ ರೈತರಿಗೆ ಸ್ಪಂದಿಸಿಲ್ಲ.
2 ತಿಂಗಳುಗಳಿಂದ ರೈತರನ್ನು ಅಲೆದಾಡಿಸುತ್ತಿದ್ದಾರೆ. 1500 ರೈತರಿಗೆ ಗ್ರೀನ್ ವೋಚರ್ ಕೊಟ್ಟಿದ್ದು, ಈ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ರೈತ ಕುಟುಂಬದವರು ತಮ್ಮ ಹಳ್ಳಿಗಳಲ್ಲಿ ಮೇ 10ಂದು ನಡೆಯುವ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ರೈತರು ಜಗಳೂರು ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದ್ದಾರೆ.
