New Name Davanagere: ” ದಾವಣಗೆರೆಯ ಸಮುದ್ರ.! ಅಶೋಕ ರೋಡ್ ಸಮುದ್ರ ” ನೆಟ್ಟಿಗರಿಂದ ದಾವಣಗೆರೆಗೆ ನಾಮಕರಣ

ದಾವಣಗೆರೆ:  ಕಳೆದ ಮೂರು ನಾಲ್ಕು ದಿನದಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಾವಣಗೆರೆ ನಗರದ ಅಶೋಕ ರಸ್ತೆ ಸಂಪೂರ್ಣವಾಗಿ ಅದಗೆಟ್ಟಿದೆ. ಈ ರಸ್ತೆಯಲ್ಲಿ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಡೀ ಅಶೋಕ ರಸ್ತೆ ಕೆರೆಯಂತೆ ಕಂಡು ಬರುತ್ತಿದ್ದು, ವಾಹನ ಯಾವ ಕಡೆಯಿಂದ ಹೋಗಬೇಕು ಎಂದು ವಾಹನ ಸವಾರರು ಚಿಂತಿತರಾಗಿದ್ದಾರೆ. ಇದೆ ಸಂದರ್ಭದಲ್ಲಿ ಪುಷ್ಪಾಂಜಲಿ ಚಿತ್ರಮಂದಿರದ ಕಡೆಗೆ ಹೋಗುವ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ನಿಜಕ್ಕೂ ವಾಹನ ಸವಾರರಿಗೆ ಈ ರಸ್ತೆಯಲ್ಲಿ ನರಕ ದರ್ಶನವಾಗುತ್ತದೆ.

ನೆಟ್ಟಿಗರು ದಾವಣಗೆರೆಗೆ ಮಳೆಯ ಅವಾಂತರದ ಬಗ್ಗೆ ವಿನೂತನ ಹೆಸರುಗಳನ್ನು ನೇಮಕ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ಸುರಿದ ಮಳೆಗೆ ದಾವಣಗೆರೆಯ ಅಶೋಕ ಚಿತ್ರಮಂದಿರದ ಬಳಿಯಿರುವ ರೈಲ್ವೇ ಗೇಟ್ ಬಳಿ ಮಳೆಯ ನೀರು ನಿಂತಿದೆ. ಇದರಿಂದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ಮೊಬೈಲ್ ನಲ್ಲಿ ಚಿತ್ರಿಸುವಾಗ ” ದಾವಣಗೆರೆಯ ಸಮುದ್ರ.! ಅಶೋಕ ರೋಡ್ ಸಮುದ್ರ ” ಅಂತಾ ಹೆಸರಿಟ್ಟಿದ್ದಾರೆ.

ಕಳೆದ ಎರಡು ಮೂರು ದಶಕದಿಂದ ಈ ರಸ್ತೆ ಇದೆ ರೀತಿ ಇದ್ದು ನಗರದ ಕಾರ್ಪೋರೆಟರ್ ಹಾಗೂ ಮೇಯರ್ ಕೂಡ ರಸ್ತೆ ಸರಿಪಡಿಸುವುದಾಗಿ ಭರವಸೆ ನೀಡಿದ್ದು ಬಿಟ್ಟರೆ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ. ಇನ್ಯಾವಾಗ ಈ ರಸ್ತೆ ಅಭಿವೃದ್ಧಿಯಾಗುತ್ತದೆ ಎಂಬುದನ್ನ ಜನರು ಕಾದು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!