ಲೋಕಲ್ ಸುದ್ದಿ

ಅಪಘಾತದಲ್ಲಿ ನವದಂಪತಿ ಸಾವು

ಚಿಕ್ಕನಾಯಕನಹಳ್ಳಿ: ಸಂಬಂಧಿಕರ ಮದುವೆಗೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಎದುರಿನ ಬರುತ್ತಿದ್ದ ಲಾರಿ ಡಿಕ್ಕಿಯಾಗಿ ನವದಂಪತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಹುಳಿಯಾರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ಕಾರಾ ಚಾಲಕ ಭರತ್ ಪ್ರಾಣಾಪಾಯದಿಂದ ಗಾಯಗೊಂಡಿದ್ದಾರೆ. ಆದರೆ ನತದೃಶ್ಯ ರಘು, ಅನುಷ ಮೃತ ದಂಪತಿಗಳಾಗಿದ್ದಾರೆ. ಇವರು ಮದುವೆಗೆಂದು ತಾಲ್ಲೂಕಿನ ತಿಗಡನಹಳ್ಳಿಯಿಂದ ಕಾರಿನಲ್ಲಿ ಬಳ್ಳಾರಿಗೆ ಪ್ರಯಾಣಿಸುತ್ತಿದ್ದರು.
ಮೃತರು ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಅನುಷ ತಿಗಡನಹಳ್ಳಿಯವರಾದರೆ, ರಘು ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿಯವರು. ಕಾರು, ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ಹರೀಶ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!