ದಾವಣಗೆರೆಯಲ್ಲೂ ಎನ್.ಐ.ಎ. ಶೋಧ..!?

ಬೆಂಗಳೂರು: ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಗುರುವಾರ ಎನ್.ಐ.ಎ. ಅಧಿಕಾರಿಗಳು ಶೋಧ ನಡೆಸಿದ್ದಾರೆ ಎನ್ನಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರವಾದಿ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ 6 ಕಡೆ ಶೋಧ ನಡೆಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಇಬ್ಬರನ್ನು ಬಂಧಿಸಿದೆ.
ಉಡುಪಿಯ ಬ್ರಹ್ಮಾವರದ ವರಂಬಲ್ಲಿ ಎಂಬಲ್ಲಿನಿ ದಂ ರೆಶಾನ್ ತಾಜುದ್ದೀನ್ ಶೇಖ್ ಹಾಗೂ ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದಿಂದ ಹುಜೇರ್ ಫರ್ಹಾನ್ ಬೇಗ್ ಎಂಬುವವರನ್ನು ಬಂಧಿಸಲಾಗಿದೆ. ಇನ್ನೂ ದಾವಣಗೆರೆಯಲ್ಲಿ ಕೂಡ ದಾಳಿ ನಡೆಸಿರಬಹುದು ಎಂಬ ಮಾಹಿತಿ ಕೂಡ ಇದ್ದು, ಎಲ್ಲಿ ಯಾರ ಮನೆ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.!
ನಿಷೇಧಿತ ಐ.ಎಸ್. ಉಗ್ರವಾದಿ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂಚು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿತ್ತು.
ಆರೋಪಿಗಳು ಮತ್ತು ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ ವೇಳೆ ಅನೇಕ ಡಿಜಿಟಲ್ ಉಪಕರಣಗಳು ಹಾಗೂ ಪ್ರಚೋದನಾಕಾರಿ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಎನ್.ಐ. ಎ. ಹೇಳಿದೆ.