ನೋ ವ್ಯಾಕ್ಸಿನ್, ನೋ ರೇಷನ್’ ಎಂಬ ನಿರ್ಬಂಧಗಳನ್ನು ಹೇರದಂತೆ ಸರ್ಕಾರದಿಂದ ಆದೇಶ
![IMG-20210902-WA0027](https://garudavoice.com/wp-content/uploads/2021/09/IMG-20210902-WA0027.jpg)
ಬೆಂಗಳೂರು: ಜನರಿಗೆ ಯಾವುದೇ ನಿರ್ಬಂಧನೆ ಹೇರದೆ, ಜಾಗೃತಿ ಮೂಡಿಸುವ ಅಭಿಯಾನದ ಮೂಲಕ ಕೋವಿಡ್ ಲಸಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ಹೊರಡಿಸಿದೆ.
‘ನೋ ವ್ಯಾಕ್ಸಿನ್, ನೋ ರೇಷನ್’ ಎಂಬ ಶೀರ್ಷಿಕೆಯಡಿ ಕೋವಿಡ್ ಲಸಿಕೆ ಪಡೆಯದವರಿಗೆ ಪಿಂಚಣಿ ಮತ್ತು ಪಡಿತರವನ್ನು ನೀಡಲ್ಲ ಎಂಬ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸರ್ಕಾರ ಇಂತಹ ಯೋಜನೆಗಳಿಗೆ ಕೋವಿಡ್ ಲಸಿಕೆ ಜೋಡಿಸಿಲ್ಲದ ಕಾರಣ ಈ ರೀತಿ ನಿರ್ಬಂಧಗಳನ್ನು ಹೇರದಂತೆ ಆದೇಶಿಸಿದೆ.
ಒಂದು ವೇಳೆ ಈ ರೀತಿಯಾಗಿ ಲಸಿಕಾಕರಣವನ್ನು ಯಾವುದೇ ಕಾರ್ಯಕ್ರಮ ಅಥವಾ ಯೋಜನೆಗೆ ತಪ್ಪಾಗಿ ಜೋಡಿಸಿದ್ದಲ್ಲಿ ಕೂಡಲೇ ಕೈಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಆರೋಗ್ಯಾಧಿಕಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ನಿರ್ದೇಶಿಸಿ ಆದೇಶ ಹೊರಡಿಸಿದ್ದಾರೆ.