ಸಚಿವ ಪ್ರಭು ಚವಾಣ್ ಹಾಗೂ ಪ್ರಕಾಶ್ ಜಾಧವ್ ಅವರಿಗೆ ನೋಟೀಸ್
ಬೀದರ್: ಅಸಾಂವಿಧಾನಿಕ ಪದ ಬಳಕೆ ಮಾಡಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಘನಶುಬಾಯಿ ತಾಂಡಾದ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹಾಗೂ ಔರಾದ್ ತಾಲ್ಲೂಕಿನ ಲಸ್ಕರ್ ನಾಯಕ ತಾಂಡದ ಪ್ರಕಾಶ ಜಾಧವ ಅವರಿಗೆ ಔರಾದ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಇಬ್ಬರೂ ಲಿಖಿತ ಸಮಜಾಯಿಷಿ ನೀಡಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಸಾಂವಿಧಾನಿಕ ಪದಗಳು ಸಮಾಜದಲ್ಲಿ ಜಾತಿ-ಜಾತಿ ನಡುವೆ ಕೋಮು ಗಲಭೆ, ವೈಮನಸ್ಸು ಹಾಗೂ ಅಶಾಂತಿ ಉಂಟು ಮಾಡುವ ಸಾಧ್ಯತೆ ಇದೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ಲಿಖಿತ ಉತ್ತರ ನೀಡಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.