ಹೆಬ್ಬಾಳ್ ಟೋಲ್ ಗೇಟ್ ಬಳಿ ಆಯಿಲ್ ತುಂಬಿದ ಲಾರಿ ಅಪಘಾತ.! ಆರ್ ಟಿ ಒ ಅಧಿಕಾರಿಗಳ ಚೆಕ್ ಪೊಸ್ಟ್ ಕಾರಣದಿಂದ ಅಪಘಾತ.!
ದಾವಣಗೆರೆ : ದಾವಣಗೆರೆ ತಾಲ್ಲೂಕು ಹೆಬ್ಬಾಳ ಗ್ರಾಮದ ಟೋಲ್ ಗೇಟ್ ಬಳಿ ಆರ್.ಟಿ.ಒ ಅಧಿಕಾರಿಗಳು ನಿಲ್ಲುವ ಜಾಗದ ಹತ್ತಿರ ರಸ್ತೆ ಅಪಘಾತವಾಗಿದ್ದು ಹೈಡ್ರಾಲಿಕ್ ಆಯಿಲ್ ತುಂಬಿದ ಲಾರಿಗೆ ಹಿಂದಿನಿಂದ ಬಂದ ಮಿನಿ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಹೈಡ್ರಾಲಿಕ್ ಟ್ಯಾಂಕ್ ಸೋರಿಕೆಯಾಗಿ ಸಾವಿರಾರು ಲೀಟರ್ ಹೈಡ್ರಾಲಿಕ್ ಆಯಿಲ್ ಮಣ್ಣು ಪಾಲಾಗಿದೆ.
ಬೆಳ್ಳಂ ಬೆಳಗ್ಗೆ ಆರ್ ಟಿ ಒ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ಸ್ಥಳಧಲ್ಲಿ ಲಾರಿಗಳನ್ನು ಇಲ್ಲಿ ತಡೆದು ನಿಲ್ಲಿಸಿವುದೇ ಅಪಘಾತಕ್ಕೆ ಕಾರಣವಾಗಿದ್ದು ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸ್ಥಳದಲ್ಲಿ ಒಟ್ಟು ಮೂರು ಲಾರಿಗಳು ಆಪಘಾತಕ್ಕೀಡಾಗಿವೆ. ಆರ್ ಟಿ ಒ ಅಧಿಕಾರಿಗಳು ಈ ಸ್ಥಳದಲ್ಲಿಯೇ ವಾಹನಗಳನ್ನು ತಡೆದು ನಿಲ್ಲಿಸುವುದಾದರೂ ಏತಕ್ಕ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಲಕ್ಷಾಂತರ ರೂಪಾಯಿ ಹೈಡ್ರಾಲಿಕ್ ಆಯಿಲ್ ಚರಂಡಿ ಸೇರಿದ್ದು ಇದರ ಹೊಣೆ ಯಾರದ್ದು. ಆರ್ ಟಿ ಓ ಕೊಡುತ್ತಾರೆಯೇ, ವಾಹನಗಳ ಮಾಲೀಕರು, ಸ್ಥಳೀಯರು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾರಿ ಅಪಘಾತವಾದ ಕೂಡಲೇ ಆರ್ ಟಿ ಒ ಜೀಪು ಹಾಗೂ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.