Omicron: ದಾವಣಗೆರೆ ಮೂಲದ 22 ವರ್ಷದ ಮಹಿಳೆಗೆ ಒಮೈಕ್ರಾನ್ ಸೋಂಕು.! USA ನಿಂದ ಬಂದಿದ್ದ ಮಹಿಳೆ|
ದಾವಣಗೆರೆ: ದಾವಣಗೆರೆ ಮೂಲದ 22 ವರ್ಷದ ಯುವತಿ ಸೇರಿದಂತೆ ರಾಜ್ಯದಲ್ಲಿ ಇಂದು ಮತ್ತೆ ಐವರಿಗೆ ಒಮೈಕ್ರಾನ್ ಸೋಂಕು ದೃಢಗೊಂಡಿದೆ.
22 ವರ್ಷದ ಮಹಿಳೆ 22 ನೇ ಡಿಸೇಂಬರ್ ರಂದು ಯು. ಎಸ್. ಎ ಇಂದ ಬಂದು ಬೆಂಗಳೂರು ಏರ್ಪೋರ್ಟ್ ನಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿರುತ್ತಾರೆ. ಜಿನಾಮಿಕ್ ಸೆಕ್ವೀನ್ಸಿಂಗ್ ಗೆ ಕಳಿಸಿದಾಗ 28/12/2021 ರಂದು ಓಮಿಕ್ರಾನ್ ಪಾಸಿಟಿವ್ ಬಂದಿರುತ್ತದೆ. ಮಹಿಳೆಯು ಲಕ್ಷಣರಹಿತವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆಗೆ ಬಂದಿರುವುದಿಲ್ಲ. ಅವರ ಸಂಪರ್ಕದ 4 ವ್ಯಕ್ತಿಗಳ ಮಾದರಿ ಪಡೆಯಲಾಗಿದೆ. ಇನ್ನೂ ಹೆಚ್ಚಿನ ವಿವರ ನಿರೀಕ್ಷಿಸಿದೆ ಎಂದು ವೈದ್ಯರು ಮಾಹಿತಿ ತಿಳಿಸಿದ್ದಾರೆ.
ಆರೊಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಯುಎಸ್ಎ ಇಂದ ಬಂದಿದ್ದ ದಾವಣಗೆರೆ ಮೂಲದ ಯುವತಿ, 24 ವರ್ಷದ ಬೆಂಗಳೂರಿನ ಯುವಕ, ದುಬೈ ಪ್ರವಾಸ ಹಿನ್ನೆಲೆ ಹೊಂದಿದ್ದ 53 ವರ್ಷದ ಪುರುಷ, 61 ವರ್ಷದ ಪುರುಷ ಸೇರಿ ಐದು ಜನರಿಗೆ ಸೋಂಕು ದೃಢಪಟ್ಟಿದ್ದು, ಅವರೆಲ್ಲರೂ ಐಸೋಲೇಷನ್ ನಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ.