ಚನ್ನಗಿರಿ ಬಳಿಯ ದಾಗಿನಕಟ್ಟೆ-ಯಲೋದಹಳ್ಳಿ ಕೆರೆಗೆ ಬಿದ್ದ ಓಮ್ನಿ ರೈತ ಸಾವು

ಚನ್ನಗಿರಿ : ದಾಗಿನಕಟ್ಟೆ ಮತ್ತು ಯಲೋದಹಳ್ಳಿ ಮಧ್ಯದಲ್ಲಿರುವ ಹಳ್ಳೂರಕಟ್ಟಿ ಕೆರೆಗೆ ತಡೆಗೋಡೆ ಇಲ್ಲದ ಕಾರಣ ಓಮಿನಿಯೊಂದು ಕೆರೆಗೆ ಬಿದ್ದ ಪರಿಣಾಮ ರೈತರೊಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಜಿ.ಸಿ. ಬಸವರಾಜಪ್ಪ(52)ಮೃತ ರೈತ. ಶನಿವಾರ ರಾತ್ರಿ ಸಮೀಪದ ಚಿರಡೋಣಿ ಹೋಗಿ ಬರುತ್ತೇನೆಂದು ಹೇಳಿ ಹೋದವರು ಅಲ್ಲಿಗೂ ಹೋಗದೆ ತಿರುಗಿ ಬಾರದ್ದಕ್ಕೆ ಭಾನುವಾರ ಬೆಳಗ್ಗೆ ಬಸವಾಪಟ್ಟಣ ಠಾಣೆಯಲ್ಲಿ ಕಾಣಿ ಆಗಿದ್ದಾರೆಂದು ದೂರು ದಾಖಲಿಸಿದ್ದರು. ಇದರ ಆಧಾರ ಮೇಲೆ ಪೊಲೀಸರು ವಾಹನ ಜಾಡು ಹಿಡಿದು ದಾಗಿನಕಟ್ಟೆ ಮತ್ತು ಯಲೋದಹಳ್ಳಿ ಮಧ್ಯದಲ್ಲಿರುವ ಹಳ್ಳೂರಕಟ್ಟಿ ಕೆರೆ ಬಳಿ ಇರುವ ಸಣ್ಣ ತಡೆಗೋಡೆ ಕಲ್ಲು ಕಿತ್ತಿರುವುದನ್ನು ಗಮನಿಸಿ ಭಾನುವಾರ ತಡರಾತ್ರಿ ಓಮಿನಿ ಅದರಲ್ಲಿರುವ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆ ರಸ್ತೆ ತಿರಿವಿನಲ್ಲಿ ಇದ್ದು, ನಿತ್ಯ ಇಲ್ಲಿ ಸಂಚರಿಸುವ ನೂರಾರು ವಾಹನಗಳು ಭಯದಿಂದಲೇ ಸಂಚರಿಸುವಂತಾಗಿದೆ. ಕೆರೆಗೆ ತಡೆಗೋಡೆ ಇಲ್ಲದೇ ಜೀವ ಭಯದಲ್ಲಿಯೇ ಸವಾರರು ವಾಹನ ಓಡಿಸಬೇಕಿದೆ. ಬಸ್, ಲಾರಿಯಂತ ದೊಡ್ಡ ವಾಹನಗಳು ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಂಚರಿಸಬೇಕು, ಇಲ್ಲವಾದರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ. ರಸ್ತೆ ಅಗಲೀಕರಣ ಮತ್ತು ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಸಾಕಷ್ಟು ಬಾರಿ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಮುಂದೆ ದೊಡ್ಡ ಅನಾಹುತ ನಡೆಯುವ ಮೊದಲೇ ಎಚ್ಚೆತ್ತುಕೊಂಡು ಅಗತ್ಯಕ್ರಮಕ್ಕೆ ಸಂಬಂಧಿಸಿದವರು ಮುಂದಾಗಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಆರ್ ರವಿಕುಮಾರ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!