ಕ್ರೈಂ ಸುದ್ದಿ

ಆಪರೇಷನ್ ‘ರಾಣಿ ಜೇನು ಹಿಡಿಯೋಣ’.!10 ರೂ ಫ್ರೂಟಿ ಜ್ಯೂಸ್ ಕುಡಿಯಲು ಬಂದು ಪೊಲೀಸರ ಬಲೆಗೆ ಬಿದ್ರು

ಆಪರೇಷನ್‘ರಾಣಿ ಜೇನು ಹಿಡಿಯೋಣ’.!10 ರೂ ಫ್ರೂಟಿ ಜ್ಯೂಸ್ ಕುಡಿಯಲು ಬಂದು ಪೊಲೀಸರ ಬಲೆಗೆ ಬಿದ್ರು

ಬೆಂಗಳೂರು: ಬರೋಬ್ಬರಿ 8.49 ಕೋಟಿ ರೂ. ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದವರನ್ನ ಅಪರೇಷನ್ ರಾಣಿ ಜೇನು ಹಿಡಿಯೋಣ ಎಂಬ ಕೋಡ್ ವರ್ಡ್ ಬಳಸಿ ಮಹಿಳೆ ಹಾಗೂ ಆಕೆಯ ಗಂಡ ಕೇವಲ ಹತ್ತು ರೂಪಾಯಿಗಳ ಫ್ರೂಟಿ ಜ್ಯೂಸ್ ಕುಡಿಯಲು ಬಂದು ಪೊಲೀಸರ ಬಲೆಗೆ ಬಿದ್ದ ರೋಚಕ ಘಟನೆ ನಡೆದಿದೆ.

ಅಂದ ಹಾಗೆ ಈ ಖತರ್‌ನಾಕ್ ದಂಪತಿಯನ್ನು ಖೆಡ್ಡಾಗೆ ಕೆಡವಲು ಮುಂದಾಗಿದ್ದ ಪಂಜಾಬ್ ಪೊಲೀಸರು ಈ ಕಾರ್ಯಚರಣೆಗೆ ರಾಣಿ ಜೇನು ಹಿಡಿಯೋಣ’ ಎಂದು ಹೆಸರಿಟ್ಟಿದ್ದರು.ಡಾಕು ಹಸೀನಾ ಅಲಿಯಾಸ್ ಮಂದೀಪ್ ಕೌರ್ ಎನ್ನುವ ಮಹಿಳೆ ತನ್ನ ಗಂಡ ಹಾಗೂ ಇತರ 10 ಸಹಚರರೊಡನೆ ಜೂನ್ 10 ರಂದು ಲೂಧಿಯಾನದ ಭದ್ರತಾ ಏಜನ್ಸಿಯೊಂದರ ಕಚೇರಿಯಿಂದ 8.49 ಕೋಟಿ ನಗದನ್ನು ದೋಚಿ ಪರಾರಿಯಾಗಿದ್ದರು.

ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಲೂಧಿಯಾನ ಪೊಲೀಸರು ಆರೋಪಿಗಳ ಹಿಡಿಯಲು ತಯಾರಾಗಿದ್ದರು. ಡಾಕು ಹಸೀನಾ ಹಾಗೂ ಆಕೆಯ ಗಂಡ ಜಸ್ವಿಂಧರ್ ಸಿಂಗ್ ಉತ್ತರಾಖಂಡದಲ್ಲಿ ದೇವಸ್ಥಾನಗಳಿಗೆ ಅಲೆದಾಡುತ್ತಾ ಪೊಲೀಸರ ಕಣ್ಣು ತಪ್ಪಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.ಇವರಿಗೆ ಬಲೆ ಬೀಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಉತ್ತರಾಖಂಡದ ಚಮೋಲಿಯ ಹೇಮಕುಂಡ ಸಾಹೀಬ್ ಗುರುಧ್ವಾರಕ್ಕೆ ತೆರಳಿದ್ದರು. ಈ ವೇಳೆ ಜನಸಂದಣಿ ಹೆಚ್ಚಿತ್ತು. ಆಗ ಪೊಲೀಸರು ಫ್ರೂಟಿ ಜೂಸ್ ಪೊಟ್ಟಣಗಳನ್ನು (ತಲಾ 10 ಮೌಲ್ಯದ) ಯಾತ್ರಾರ್ಥಿಗಳಿಗೆ ಉಚಿತವಾಗಿ ವಿತರಿಸುವ ತಂತ್ರ ಹೆಣೆದಿದ್ದರು.

ಈ ವೇಳೆ ಅಲ್ಲಿಗೆ ಬಂದ ಡಾಕು ಹಸೀನಾ ಹಾಗೂ ಆಕೆಯ ಗಂಡ ಜಸ್ವಿಂಧರ್ ಸಿಂಗ್ ಫ್ರೂಟಿ ಪೊಟ್ಟಣಗಳನ್ನು ತೆಗೆದುಕೊಳ್ಳುತ್ತಾ ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದರು. ಅದಾಗ್ಯೂ ಕೂಡ ಅವರನ್ನು ಅಲ್ಲಿಂದ ತೆರಳಲು ಬಿಟ್ಟ ಪೊಲೀಸರು ಅವರನ್ನು ಹಿಂಬಾಲಿಸಿ ಬಲೆಗೆ ಕೆಡವಿದ್ದಾರೆ.ಈ ಆರೋಪಿ ದಂಪತಿಗಳು ದಿಢೀರ್ ಶ್ರೀಮಂತರಾಗಬೇಕು ಎಂದು ಹಣ ದೋಚಿದ್ದರು. ಬಳಿಕ ನೇಪಾಳದಲ್ಲಿ ನೆಲೆ ನಿಲ್ಲಬೇಕು ಎಂದು ಯೋಜಿಸಿದ್ದರು, ಅದಕ್ಕೂ ಮೊದಲು ಉತ್ತರಾಖಂಡದಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಮಾಡಬೇಕು ಎಂದುಕೊಂಡಿrobbery,ದ್ದರೆಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top