ಮಾಡಾಳು ಮನೆ ಮೇಲೆ ದಾಳಿ ಮಾಡಿಸಿದ್ದು ಸಿದ್ದೇಶ್ವರ ಅಂತಾ ಹೇಳ್ತಾರೆ.! ಎಸ್ ಎಸ್
ದಾವಣಗೆರೆ : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಅಂತಾ ನಮ್ಮವರು ಹೇಳ್ತಾರೆ ಎಂದು
ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆ ಯಲ್ಲಿ ಹೇಳಿಕೆ ನೀಡಿದ ಶಾಮನೂರು ಶಿವಶಂಕರಪ್ಪ ನಮ್ಮ ಪಕ್ಷದಲ್ಲಿ ಸಂಸದ ಜಿಎಂ ಸಿದ್ದೇಶ್ವರ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ದಾಳಿ ನಡೆಸಿದ್ದರು ಎಂದು ಮಾತಾಡುತ್ತಿದ್ದಾರೆ. ಇಷ್ಟಕ್ಕೂ ಇದು ಅವರ ಪಕ್ಷದ ವ್ಯವಹಾರ ನಮಗ್ಯಾಕೆ ಬೇಕು ಎಂದು ಶಾಮನೂರ ಶಿವಶಂಕರಪ್ಪ ಹೇಳಿದರು.
ಶಾಸಕ ಮಾಡಾಳ್ ಮನೆ ಪರಿಶೀಲಿಸಿದ ಲೋಕಾಯುಕ್ತ ತಂಡ : ದಾವಣಗೆರೆ ಮತ್ತು ಹಾವೇರಿ ವಿಭಾಗದ ಲೋಕಾಯುಕ್ತ ತಂಡ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸ್ವಂತ ಗ್ರಾಮವಾದ ಚನ್ನೇಶಪುರಕ್ಕೆ ತೆರಳಿ ದಾಖಲೆ ಪರಿಶೀಲಿಸಿದೆ.
ದಾಳಿ ವಿಷಯ ತಿಳಿದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ್ ಮತ್ತು ಪ್ರವೀಣ್‌ಕುಮಾರ್ ಬೆಂಗಳೂರಿಗೆ ತೆರಳಿದ್ದಾರೆ. ಇವರ ಮನೆಯಲ್ಲಿ ಶಾಸಕರ ಪತ್ನಿ, ಸೊಸೆ ಮಾತ್ರ ಇದ್ದರು. ಲೋಕಾಯುಕ್ತ ಅಧಿಕಾರಿಗಳು ರಾತ್ರಿವರೆಗೂ ಪರಿಶೀಲಿಸಿದ್ದಾರೆ.
ಇದರಿಂದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಶಾಸಕರ ಮನೆಗೆ ದೌಡಾಯಿಸಿ ಶಾಸಕರ ಕುಟುಂಬದವರ ಜತೆ ಇದ್ದರು. ಈ ವೇಳೆ ಅಭಿಮಾನಿಗಳು, ಇದು ವಿರೋಧ ಪಕ್ಷದವರ ಷಡ್ಯಂತ್ರವಾಗಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಶಾಸಕರು ಬಂದು ಹೋದರೂ ಅಭಿವೃದ್ದಿಗೆ ಮುಂದಾಗಲಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಲುಕ್ ಔಟ್ ನೋಟಿಸ್ ಸಾಧ್ಯತೆ ; ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದು, ಲೋಕಾಯುಕ್ತ ಲುಕ್ ಔಟ್ ನೋಟಿಸ್ ನೀಡುವ ಸಾಧ್ಯತೆ ಇದೆ..ಇನ್ನು ಬಂಧನ ಭೀತಿಯಲ್ಲಿರುವ ಮಾಡಾಳ್ ನಿರೀಕ್ಷಣಾ ಜಾಮೀನುಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ನಗರಕ್ಕೆ ಬೇರೆ ಜಿಲ್ಲೆಯಲ್ಲಿನ ಲೋಕಾಯುಕ್ತ ಆಗಮಿಸಿದ್ದು, ಶೀಘ್ರವೇ ಬಂಧನ ಆಗಲಿದೆ ಎಂಬ ಮಾಹಿತಿ ತಿಳಿದಿದೆ