ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಒಬ್ಬನೇ ಪ್ರವಾಸ ಮಾಡುವುದಿಲ್ಲ ಬಿಎಸ್ ವೈ

IMG-20210829-WA0018

ಶಿಕಾರಿಪುರ: ರಾಜ್ಯದಲ್ಲಿ ಒಬ್ಬನೇ ಪ್ರವಾಸ ಮಾಡುವುದಿಲ್ಲ ಮುಖ್ಯಮಂತ್ರಿಗಳು ರಾಜ್ಯಾಧ್ಯಕ್ಷರು ಹಾಗೂ ಸಚಿವರ ಜೊತೆ ಪ್ರವಾಸ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಸ್ಪಷ್ಟನೆ ನೀಡಿದರು
ಶಿಕಾರಿಪುರ ಪಟ್ಟಣದ ಕುಮದ್ವತಿ ವಸತಿಯುತ ಕೇಂದ್ರ ಶಾಲೆಯ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು
ಗಣೇಶ ಹಬ್ಬದ ನಂತರ ಪಕ್ಷದ ಸಂಘಟಿಸಲು ರಾಜ್ಯ ಪ್ರವಾಸ ಆರಂಭಿಸುತ್ತೇನೆ ಸುಮಾರು 140 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ನಿಟ್ಟಿನಿಂದ ಮುಂದಗೊತ್ತಿದ್ದೇನೆ. ಯಾರ ಅವಲಂಬನೆಯಿಲ್ಲದೆ ಸರಕಾರವನ್ನು ರಚಿಸಲು ಅಗತ್ಯವಾದ ಸ್ಥಾನಗಳಿಸಲು ಶ್ರಮ ಹಾಕುತ್ತೇನೆ ಹಿಂದೆ ಬೇರೆಯವರ ಅವಲಂಬಿಸಿದ್ದರಿಂದ ಉಂಟಾದ ಗೊಂದಲ ನಿಮಗೆ ಗೊತ್ತಿದೆ ಎಂದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಾರು ನನಗೆ ಒತ್ತಡ ಹಾಕಿಲ್ಲ ರಾಜಕೀಯದಿಂದ ಬೇರೆಯವರಿಗೆ ಅವಕಾಶ ನೀಡಲು ರಾಜೀನಾಮೆ ನೀಡಿದ್ದೇನೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ನನಗೆ ನೀಡಿದಂತೆ ಈ ಮಂತ್ರಿಮಂಡಲಕ್ಕೆ ರಾಜ್ಯದ ಜನತೆ ಸಹಕಾರ ನೀಡಬೇಕು ದೇಶ ಮಾದರಿಯಾಗುವ ರೀತಿ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯ ಎಂದು ಕರೆ ನೀಡಿದರು

Leave a Reply

Your email address will not be published. Required fields are marked *

error: Content is protected !!