ಪೇದೆಗಳು ಸೆಲ್ಯೂಟ್ ಹೊಡೆಯಲು ಮಾತ್ರವಿಲ್ಲ.! ಯಾವ ಗೃಹಸಚಿವರು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ – ಆರಗ ಜ್ಞಾನೇಂದ್ರ

IMG-20210902-WA0023

 

ದಾವಣಗೆರೆ: ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಪಿಎಸ್ಐ ಮತ್ತು ಕಾನ್ಸೆಟೇಬಲ್ ಹುದ್ದೆಗಳನ್ನು ಇನ್ನೆರಡು ವರ್ಷಗಳಲ್ಲಿ ಭರ್ತಿ ಮಾಡುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಹೊನ್ನಾಳಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ನಾಲ್ಕು ಸಾವಿರ ಕಾನ್ಸೆಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಖಾಲಿ ಇರುವ ಪಿಎಸ್ಐ ಹುದ್ದೆಗಳನ್ನು ಶೀಘ್ರದಲ್ಲೇ ತುಂಬಲಾಗುತ್ತದೆ ಎಂದರು.

ಕಾನ್ಸೆಟೇಬಲ್ ಗಳೊಂದಿಗೆ ಅವರ ಸಮಸ್ಯೆ, ಬೇಕು-ಬೇಡಗಳ ಕುರಿತು ಚರ್ಚಿಸಿರಲಿಲ್ಲ.‌ಆದರೆ,
ನಾನು ಪೊಲೀಸರು ನೆಮ್ಮದಿಯಿಂದ ಇರುವ ವ್ಯವಸ್ಥೆ ಕಲ್ಪಿಸಬೇಕೆಂಬ ಉದ್ದೇಶದಿಂದಲೇ ಇದುವರೆಗೂ ಯಾವ ಗೃಹಸಚಿವರು ಮಾಡದ ಕೆಲಸವನ್ನು ಮಾಡಿದ್ದೇನೆ. ಪೇದೆಗಳೆಂದರೆ ಅವರು ಕೇವಲ ಸೆಲ್ಯೂಟ್ ಹೊಡೆಯಲು ಮಾತ್ರವಿಲ್ಲ. ಅವರ ಸಮಸ್ಯೆಗಳನ್ನ ಆಲಿಸಿ ಪರಿಹಾರ ಕಂಡು ಕೊಡಬೇಕಾದ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಹೇಳಿದರು.

ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪೊಲೀಸರಿಗೆ ಎರಡು ಬೆಡ್ ರೂಂ ಇರುವ ವಸತಿ ಸಮುಚ್ಚಯವನ್ನು ನಿರ್ಮಿಸಿ ಕೊಟ್ಟಿದ್ದರು. ರಾಜ್ಯದಲ್ಲಿ ಇದುವರೆಗೂ ಶೇ.49 ರಷ್ಟು ಪೊಲೀಸರು ವಸತಿ ಸಮುಚ್ಛಯ ಪಡೆದಿದ್ದಾರೆ. ಉಳಿದವರಿಗೆ ಮುಂದೆಯೂ ನಿರ್ಮಿಸಿ ಕೊಡುವ ಜವಾಬ್ದಾರಿ ತಮ್ಮದು ಎಂದು ಭರವಸೆ ನೀಡಿದರು.

ಈಗ ಪೊಲೀಸ್ ಇಲಾಖೆಗೆ ಪಿಯುಸಿ, ಪದವಿಧರರು, ಸ್ನಾತಕೋತ್ತರ, ಇಂಜಿನಿಯರ್ ಪದವಿ ಮಾಡಿದವರು ಸಹ ಕಾನ್ಸೆಟೇಬಲ್ ಗಳಾಗಿ ಬರುತ್ತಿದ್ದಾರೆ. ಅವರನ್ನು ಬಳಸಿಕೊಂಡು ತರಬೇತಿ ನೀಡಿ ಜನಸ್ನೇಹಿ ಪೊಲೀಸ್ ರಕ್ಷಣೆ ನೀಡುತ್ತೇವೆ. ಕ್ರಿಮಿನಲ್ಸ್ ಗಳಿಗೆ ಸಿಂಹಸ್ವಪ್ನಗಳಾಗಿರಬೇಕು ಹಾಗೆ ಅವರನ್ನು ತಯಾರಿ ಮಾಡುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!