ಬಾಲಕಿಯ ಪೋಷಕರ ಪತ್ತೆಗೆ ಸಹಕರಿಸಲು ಮನವಿ
ದಾವಣಗೆರೆ : ಕಳೆದ ಜನವರಿ 01 ರಂದು ಹೊನ್ನಾಳಿ ನಗರದ ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ಬಾಲಕಿ ಅಖಿಲ/ಶಬಾನಾ ಎಂಬ ಬಾಲಕಿ ದಾಖಲಾಗಿದ್ದು, ಬಾಲಕಿ ಹೇಳಿಕೊಂಡಿರುವಂತೆ ತನ್ನ ತಂದೆ ಹೆಸರು ಸೈಯದ್ ಸಿಕಂದರ್, ತಾಯಿ ಹೆಸರು ಸೋನಿ ಹಾಗೂ ಪಾನು ಎಂದು ಹೇಳಿಕೊಂಡಿರುತ್ತಾಳೆ. ಬಾಲಕಿಯ ಪೋಷಕರ ಪತ್ತೆಗೆ ಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ. ಬಾಲಕಿಯ ಚಹರ ವಿವರ ಇಂತಿದೆ. ಸುಮಾರು 17 ವರ್ಷ ವಯಸ್ಸಾಗಿದ್ದು 151 ಸೆಂ.ಮಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕುತ್ತಿಗೆಯ ಬಲಭಾಗದ ಮೇಲೆ ಕಪ್ಪು ಮಚ್ಚೆ ಇದೆ, ಓಲೆ ಧರಿಸುವ ಕಿವಿಗಳ ಭಾಗ ಹರಿದಿದೆ, ಬಾಲಕಿಯು ಹಿಂದಿ ಹಾಗೂ ಉರ್ದು ಭಾಷೆಗಳನ್ನು ಮಾತನಾಡುತ್ತಾಳೆ.
ಬಾಲಕಿಯ ತಂದೆ-ತಾಯಿ, ಪೋಷಕರು, ಸಂಭಂದಿಕರು ಹಾಗೂ ಇತರರು ಬಾಲಕಿಯನ್ನು ಗುರುತಿಸಿದಲ್ಲಿ ಸಂಪರ್ಕಿಸಬೇಕಾದ ವಿಳಾಸ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜೆ.ಹೆಚ್ ಪಟೇಲ್ ಬಡಾವಣೆ, ಶಾಮನೂರು. ಅಥವಾ ಅಧೀಕ್ಷಕರು ಬಾಲಕಿಯರ ಸರ್ಕಾರಿ ಬಾಲಮಂದಿರ ಶ್ರೀರಾಮನಗರ, ಲೋಕಿಕೆರೆ ರಸ್ತೆ ದಾವಣಗೆರೆ, ದೂರವಾಣಿ ಸಂಖ್ಯೆ: 9901938005 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.