ಲೋಕಲ್ ಸುದ್ದಿ

ಅಂಬೇಡ್ಕರ್ ಅವರನ್ನು ಅವಮಾನಿಸಿದವರನ್ನ ದೇಶದ್ರೋಹಿಗಳೆಂದು ಘೋಷಿಸಲು ಮನವಿ

ದಾವಣಗೆರೆ: ಅಂಬೇಡ್ಕರ್ ಅವರನ್ನು ಅವಮಾನಿಸಿದ ಜೈನ್ ವಿಶ್ವವಿದ್ಯಾಲಯ ,ಅದರ ವಿದ್ಯಾರ್ಥಿಗಳ ಮತ್ತು ಹಿಂದುತ್ವದ ಪರವಾಗಿರುವ ರಾಷ್ಟ್ರೀಯ ದಲಿತ ಸೇನೆಯ ಹಮಾರಾ ಪ್ರಸಾದ್ – ಇವರುಗಳ ಕೃತ್ಯಗಳು ಯಾವುದೇ ದೇಶದ್ರೋಹದ ಕೃತ್ಯಗಳಿಗಿಂತ ಕಡಿಮೆಯವಲ್ಲ ಎಂಬುದು ತಮಗೂ ತಿಳಿದ ಸಂಗತಿಯೇ ಅದ್ದರಿಂದ ಸಾಮಾಜಿಕ ಸಂಘರ್ಷ ಸಮಿತಿ, ಕರ್ನಾಟಕ,
ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಇಂದು ಪ್ರತಿಭಟನೆ ನಡೆಸಿದರು.

1) ಜೈನ್ ವಿಶ್ವವಿದ್ಯಾಲಯ ರಾಷ್ಟ್ರೀಕರಿಸಿ.

ಜಗತ್ತಿನ ಶ್ರೇಷ್ಠ ಮತ್ತು ಅತ್ಯುನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಂಬೇಡ್ಕರ್ ಅವರನ್ನು ಸರ್ವ ಶ್ರೇಷ್ಠ ಜಾಗತಿಕ ಜ್ಞಾನಿಯೆಂದು ಪರಿಗಣಿ
ಸಿವೆ.ಈ ಮಾಹಿತಿಯು ಜಗತ್ತಿಗೇ ತಿಳಿದ ಸಂಗತಿಯೇ.ಇದು ಸಮಗ್ರ ಭಾರತೀಯರಿಗೆ ಸಂದ ಗೌರವ,ಘನತೆಯಾಗಿದೆ.
ಅದರಿಂದ ದೇಶದ ಜನತೆ ಜಗತ್ತಿನಲ್ಲಿ ತಲೆ ಎತ್ತಿ ಬೀಗು
ವಂತಾಗಿದೆ.ಜ್ಞಾನದಲ್ಲಿ ಭಾರತೀಯರನ್ನು ಯಾರೂ ಸರಿಗಟ್ಟ ಲಾರರು ಅನ್ನುವ ಸತ್ಯವು ಅಂಬೇಡ್ಕರ್ ಅವರಿಂದ ನಮಗೆಲ್ಲಾ ದೊರಕಿತು.ಈ ದೃಷ್ಟಿಯಲ್ಲಿ ಜ್ಞಾನ=ಅಂಬೇಡ್ಕರ್,
ಅಂಬೇಡ್ಕರ್ = ಜ್ಞಾನ ಅನ್ನುವ ಸಮೀಕರಣವು ಜಗತ್ತಿನೆ
ಲ್ಲೆಡೆ ಪಸರುತ್ತಿದೆ.

ಹೀಗಿದ್ದರೂ ಜೈನ್ ವಿಶ್ವವಿದ್ಯಾಲಯ ಅನ್ನುವ ಬೆಂಗಳೂರಿನ ವಿಶ್ವವಿದ್ಯಾಲಯದ ಪಂಚೇಂದ್ರಿಯಗಳಿಗೆ ಮೆತ್ತಿಕೊಂಡಿರುವ ಜಾತಿಯ ಕೊಳಕಿನಿಂದ ಅಂಬೇಡ್ಕರವರ ಜ್ಞಾನವು ಕಾಣದಾಗಿದೆ.ಅಲ್ಲಿಗೆ ಜ್ಞಾನದ ಕೇಂದ್ರವಾಗ ಬೇಕಾಗಿದ್ದ ಈ ಜೈನ್ ವಿಶ್ವವಿದ್ಯಾಲಯವು ಜಾತಿಯ ಹೊಲಸು ಕೇಂದ್ರವಾಗಿದೆ ಅನ್ನುವುದು ಮೇಲ್ನೋಟದಲ್ಲಿ ದರ್ಶಿತವಾಗುತ್ತಿರುವ ಸತ್ಯಾಂಶವಾಗಿದೆ.ಜೊತೆಗೆ ಈ ವಿಶ್ವವಿದ್ಯಾಲಯದ ಕೆಳ ಹಂತದ ಶೈಕ್ಷಣಿಕ ಮಟ್ಟವನ್ನು ತೋರಿಸುತ್ತದೆ.ಕಾರಣ ಜೈನ್ ವಿಶ್ವವಿದ್ಯಾಲಯ ಮತ್ತು ಅದರ ಸಂಸ್ಥೆಯ ಅಡಿಯಲ್ಲಿರುವ ಎಲ್ಲಾ ಶಕ್ಷಣಿಕ ಸಂಸ್ಥೆ ಗಳನ್ನು,ಶಾಲಾ-ಕಾಲೇಜುಗಳನ್ನು ಸರ್ಕಾರವೇ ಜರೂರಾಗಿ ವಶಪಡಿಸಿ ಕೊಳ್ಳುವ ಮತ್ತು ಜೈನ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ದೇಶದ್ರೋಹಿಗಳೆಂದು ಪರಿಗ
ಣಿಸುವ ಅಗತ್ಯವಿದೆ.

2) ದೇಶದ್ರೋಹಿ ರೌಡಿ ವಿದ್ಯಾರ್ಥಿಗಳು.

ಯಾವುದೇ ವ್ಯಕ್ತಿಯ ವಿಕಸನಕ್ಕೆ ಜ್ಞಾನ ಮತ್ತು ನೈತಿಕತೆ ಆಧಾರಸ್ತಂಭಗಳು.ಈ ಎರಡೂ ಮೌಲ್ಯಗಳನ್ನು ಹೆಚ್ಚಾಗಿ ಈ ದೇಶದಲ್ಲಿ ಯಾರಲ್ಲಾದರೂ ಮೇಳೈಸಿ ಕೊಂ ಈ22ದೇಶದ್ರೋಹಿಗಳುಡಿದ್ದವು ಅಂದರೆ ಅದು ಅಂಬೇಡ್ಕರ್ ಅವರಲ್ಲಿ ಅನ್ನುವುದನ್ನು ಎಷ್ಟೋ ಜಾತಿವಾದಿಗಳು ಕೋಮುವಾದಿಗಳು ಸಮ್ಮತಿಸಿದ ವಿಚಾರ.ದಿನದ ಹದಿನೆಂಟು ಗಂಟೆಗಳ ತನಕ ಓದುವ ಚಿಂತಿಸುವ ಬರೆಯುವ ಕಾರ್ಯದಲ್ಲಿ ನಮ್ಮ ದೇಶದಲ್ಲಿ ಯಾರಾದರೂ ತೊಡಗಿಕೊಂಡಿದ್ದರು ಎಂದರೂ ಅವರು ಅಂಬೇಡ್ಕರ್ ಅವರೇ ಆಗಿದ್ದಾರೆ.ತಾವು ಗಳಿಸಿದ ಜ್ಞಾನವನ್ನು ಅಧಿಕಾರವನ್ನು ಪ್ರಭಾವವನ್ನು ಆದಾಯವನ್ನು ನೋವುಂಡ ಜನರ ವಿಮೋಚನೆಗಾಗಿ ಉಪಯೋಗಿಸಿಕೊಂಡಿದ್ದಾರೆ ಎನ್ನುವುದಕ್ಕೂ ಅಂಬೇಡ್ಕರವರ ಹೆಸರೇ ಪ್ರಥಮವಾಗಿ ನಮ್ಮ ಮುಂದೆ ಬರುವಂತಹುದಾಗಿದೆ.

ಇಂಥ ವ್ಯಕ್ತಿತ್ವವು ಮನುಷ್ಯರಾಗಿ ಬದುಕಲು ಬಯಸು
ವವರಿಗೆ ಆದರ್ಶದ ಚೇತನ.ಯಾವುದೇ ಜಾತಿಯ ವರ್ಗದ ಪಂಥದ ಧರ್ಮದ ವಿದ್ಯಾರ್ಥಿಗಳಿಗೆ ಜ್ಞಾನದ ಸಾಗರವಾದ ಅಂಬೇಡ್ಕರವರು ಆದರ್ಶಪ್ರಾಯರು.ಆದರೆ ಕುಡುಕರಿಗೆ ಜಾತಿವಾದಿಗಳಿಗೆ ಕೋಮುವಾದಿಗಳಿಗೆ ಜಾತಿಯ ದುರಂಹಕಾರಿಗಳಿಗೆ ಹಣದ ದರ್ಪದವರಿಗೆ ಭ್ರಷ್ಟರಿಗೆ ಅಯೋಗ್ಯ ರಕ್ತದವರಿಗೆ ದೇಶ ದ್ರೋಹಿಗಳಿಗೆ ನೀಚರಿಗೆ ಕೊಳಕರಿಗೆ ಅಂಬೇಡ್ಕರ್ ಅವರು ಆದರ್ಶರಾಗಿ ಕಾಣುವುದಿಲ್ಲ.ಇಂಥ ಅವಗುಣಗಳ ಸಾಮಾ
ಜಿಕ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ಬದುಕಿರುವ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಪ್ರಭಾವ ಬೀಳಲು ಸಾಧ್ಯವಿಲ್ಲ.ಈ ಹುಡುಗರಲ್ಲಿ ಜ್ಞಾನದ ಹಸಿವಿಲ್ಲ.ಬದಲಿಗೆ ಬಿಯರ್ ಕುಡಿಯುವ ಹಸಿವಿದೆ.
ಮೇಲ್ಜಾತಿಯ ದುರಂಹಕಾರದ ಕೊಳಕು ಈ ವಿದ್ಯಾರ್ಥಿಗಳ
ಮಿದುಳಿನಲ್ಲಿ ಮತ್ತು ಎದೆಯಲ್ಲಿ ತುಂಬಿದೆ.ಹುಟ್ಟಿನ ಹೊಲಸು ದೊಡ್ಡಸ್ತಿಕೆ ಅವರಾಡಿರುವ ನಾಟಕದ ದೃಶ್ಯಗಳಲ್ಲಿ ಮತ್ತು ಸಂಭಾಷಣೆಗಳಲ್ಲಿ ಎದ್ದು ಕಾಣುತ್ತಿದೆ.ದಲಿತರನ್ನು ಬಹಿರಂಗವಾಗಿ ಕುಚೋಧಿಸುವ ಈ ವಿದ್ಯಾರ್ಥಿಗಳು ನಾಳೆ ತಮ್ಮ ಊರುಗಳಲ್ಲಿರುವ ದಲಿತರನ್ನು ಸುಖಾಸುಮ್ಮನೆ ಒಡೆಯುವುದಿಲ್ಲ,ಬೈಯುವುದಿಲ್ಲ,ಹಲ್ಲೆ,ಕೊಲೆ,ಅತ್ಯಾಚಾರ ಮಾಡುವುದಿಲ್ಲ ಅನ್ನುವ ಖಾತ್ರಿಯಿಲ್ಲ.ಅದಕ್ಕಾಗಿ ಅಂಬೇಡ್ಕರವರನ್ನು ಮತ್ತು ದಲಿತರನ್ನು ಅವಮಾನಿಸುವ
ಈ ಬೀಯರ್ ಬ್ರಾಂಡಿ ಕುಡಿತದ ವಿದ್ಯಾರ್ಥಿಗಳಿಗೆ ಈಗಲೇ ತಕ್ಕ ಶಿಕ್ಷೆ ವಿಧಿಸುವ ಅಗತ್ಯವಿದೆ.ತಕ್ಷಣವೇ ಅವರ ವಿರುದ್ಧ
ಕಾನೂನು ಬಾಹಿರ ಕ್ರಿಯೆಗಳ ತಡೆಯುವ ನಿಯಮ ಮತ್ತು
ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ.

3) RDS ಭಯೋತ್ಪಾದಕ ಸಂಘಟನೆ ಬ್ಯಾನ್ ಆಗಲಿ.

ಇನ್ನು,ಅಂಬೇಡ್ಕರವರನ್ನು ಕೊಲ್ಲುತ್ತಿದ್ದೆ ಎಂದು ಘೋಷಿಸಿ
ರುವ ಹರಾಮಾ ಪ್ರಸಾದ್ ಅನ್ನುವ ವ್ಯಕ್ತಿಯಲ್ಲಿ ಕೊಲೆಗ
ಡುಕನಿದ್ದಾನೆ.ಹಿಂದುತ್ವದ ರಾಷ್ಟ್ರೀಯ ದಲಿತ ಸೇನೆಯ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷನಾಗಿರುವ ಈತ ತನ್ನ ಸಿದ್ಧಾಂತ ಮತ್ತು ಕ್ರಿಯೆಗಳಿಗೆ ಎದುರಾಗಿರುವವರನ್ನು ಕೊಚ್ಚಿಹಾಕುವ ದ್ವೇಷ ಮತ್ತು ಸಿಟ್ಟು ಹೊಂದಿರುವನು.ಇಂಥ
ಕ್ರೂರ ವ್ಯಕ್ತಿತ್ವದ ಕೊಲೆಗಡುಕ ವ್ಯಕ್ತಿಯು ಇಂಡಿಯಾ ಅನ್ನುವ ಎಲ್ಲರನ್ನೂ ಒಳಗೊಳ್ಳುವ ನಮ್ಮ ದೇಶದಲ್ಲಿ ಬದುಕಲು,ವಾಸಿಸಲು ಯೋಗ್ಯವಾಗಿರದ ಈ ಮನುಷ್ಯ
ನಿಗೆ ದೇಶದ್ರೋಹಿ ಪಟ್ಟ ಕಟ್ಟಿ ದೇಶದಿಂದ ಉಚ್ಚಾಟಿಸಲು
ಕ್ರಮ ಕೈಗೊಳ್ಳಲು ಪ್ರಯತ್ನಿಸುವ ಅನಿವಾರ್ಯತೆಯಿದೆ ಅನ್ನುವ ಸತ್ಯಾಂಶವು ತಮಗೂ ತಿಳಿದ ಸಂಗತಿಯೇ ಸರಿ.

ಮೇಲಿನ ಮೂರು ಪ್ರಕರಣಗಳ ಬಗ್ಗೆ ತಾವು ಸೂಕ್ತ ಕ್ರಮ ಜರುಗಿಸುತ್ತಿರೀ ಎಂದು ನಾವೆಲ್ಲ ಧೃಢವಾಗಿ ನಂಬಿದ್ದೇವೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!