‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಲಿಂಕ್ ಓಪನ್ ಮಾಡಿದ್ರೆ ಫೋನ್ ಹ್ಯಾಕ್ ಆಗಲಿದೆ,! ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ಸಂದೇಶ ರವಾನೆ!
ಬೆಂಗಳೂರು : ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಇಡೀ ದೇಶದಲ್ಲಿ ಸಾಕಷ್ಟು ಚರ್ಚೆಗೊಳಪಟ್ಟಿದೆ. ದೇಶದ ಮುಕುಟವಾದ ಕಾಶ್ಮೀರದ ಪಂಡಿತರ ಕತೆಯನ್ನು ಈ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಈ ಚಿತ್ರ ವೀಕ್ಷಿಸುವವರಿಗೆ ತೆರಿಗೆಯನ್ನೂ ತೆಗೆದುಹಾಕಲಾಗಿದೆ.ನಮ್ಮ ರಾಜ್ಯದ ಎಲ್ಲ ಶಾಸಕರಿಗೂ ಈ ಚಿತ್ರವನ್ನು ನೋಡುವಂತೆ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಒಟ್ಟಾರೆ, ಈ ಚಿತ್ರ ದೇಶದಲ್ಲಿ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ. ಈ ಹಿನ್ನೆಲೆ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಉಚಿತವಾಗಿ ಡೌನ್‌ಲೌಡ್ ಮಾಡಿ ಎಂಬ ಅನೇಕ ಲಿಂಕ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಮುಖವಾಗಿ ವಾಟ್ಸ್ಆ್ಯಪ್‌ನಲ್ಲಿ ಸಹ ಹಲವು ಲಿಂಕ್‌ಗಳನ್ನು ಫಾರ್ವಡ್ ಮಾಡಲಾಗುತ್ತಿದೆ. ಈ ವಿಚಾರ ಪೊಲೀಸರ ಗಮನಕ್ಕೂ ಬಿದ್ದಿದ್ದು, ದಿ ಕಾಶ್ಮೀರ್ ಫೈಲ್ಸ್ ಉಚಿತ ಚಲನಚಿತ್ರ ಡೌನ್‌ಲೋಡ್ ಎಂಬ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವಂತೆ ಎಚ್ಚರಿಕೆ ನೀಡಲಾಗಿದೆ.
‘ದಿ ಕಾಶ್ಮೀರ ಫೈಲ್ಸ್’ ಎಂಬ ಚಲನಚಿತ್ರಕ್ಕೆ ಸಂಬAಧಿಸಿದ ವಾಟ್ಸ್ಆ್ಯಪ್‌ನಲ್ಲಿ ಸ್ವೀಕರಿಸಬಹುದಾದ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ಉಚಿತವಾಗಿ ಡೌನ್‌ಲೋಡ್ ಮಾಡುವಂತೆ ಆಮಿಷವೊಡ್ಡುವ ಮೂಲಕ ಹ್ಯಾಕರ್‌ಗಳು ತಮ್ಮ ಸ್ಮಾರ್ಟ್ಫೋನ್‌ಗಳಲ್ಲಿ ಮಾಲ್‌ವೇರ್ ಅನ್ನು ಸ್ಥಾಪಿಸಲು ಜನರನ್ನು ಮರುಳು ಮಾಡಲು ಪ್ರಯತ್ನಿಸಬಹುದು ಎಂದೂ ಪೊಲೀಸರು ಎಚ್ಚರಿಸಿದ್ದಾರೆ. ಕಾಶ್ಮೀರ ಫೈಲ್ಸ್ ಚಲನಚಿತ್ರ ಈಗಾಗಲೇ ಅನೇಕ ಮಿಶ್ರ ವಿಮರ್ಶೆಗಳಿಗೆ ಒಳಗಾಗಿದೆ. ವಿವೇಕ್ ಅಗ್ನಿಹೋತ್ರಿ ಅವರು ಬರೆದು ನಿರ್ದೇಶಿಸಿದ ಚಲನಚಿತ್ರವು 90ರ ದಶಕದಲ್ಲಿ ಕಾಶ್ಮೀರಿ ದಂಗೆಯ ಸಮಯದಲ್ಲಿ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದೆ. ಚಲನಚಿತ್ರವು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವುದರಿಂದ, ಅನೇಕರು ಅದನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಬಯಸುತ್ತಾರೆ ಮತ್ತು ವಾಟ್ಸ್ಆ್ಯಪ್‌ನಲ್ಲಿ ಚಲನಚಿತ್ರವನ್ನು ಡೌನ್‌ಲೋಡ್ ಮಾಡಲು ಲಿಂಕ್‌ಗಳನ್ನು ಕಾಣಬಹುದು.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ವಾಟ್ಸ್ಆ್ಯಪ್‌ನಲ್ಲಿ ಕಳುಹಿಸಲಾದ ಮಾಲ್‌ವೇರ್ ಅನ್ನು ಕ್ಲಿಕ್ ಮಾಡುವುದರಿಂದ ಫೋನ್‌ಗಳನ್ನು ಹ್ಯಾಕ್ ಮಾಡುವುದು ಮತ್ತು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿದ ಬ್ಯಾಂಕ್ ಅಕೌಂಟ್‌ಗಳು ಖಾಲಿ ಆಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ನೋಯ್ಡಾ) ರಣ್‌ವಿಜಯ್ ಸಿಂಗ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ‘ಕಾಶ್ಮೀರ್ ಫೈಲ್‌ನ ಚಲನಚಿತ್ರವನ್ನು ಬಳಸಿರುವ ಯಾವುದೇ ನಿರ್ದಿಷ್ಟ ಪ್ರಕರಣ ಇನ್ನೂ ವರದಿಯಾಗಿಲ್ಲ. ಆದರೆ ಜನರ ಫೋನ್‌ಗೆ ಕನ್ನ ಹಾಕಲು ಅಥವಾ ಹಣವನ್ನು ವಂಚಿಸಲು ಇಂತಹ ವಿಧಾನಗಳನ್ನು ವಂಚಕರು ಬಳಸುತ್ತಿದ್ದಾರೆ’ ಎಂದು ರಣ್‌ವಿಜಯ್ ಸಿಂಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.