ದಾವಣಗೆರೆ ಪಾಲಿಕೆ ವ್ಯಾಪ್ತಿಯ ಈ ಭಾಗದಲ್ಲಿ ನೀರಿನ ವ್ಯತ್ಯಯ ಸಹಕರಿಸಿ.!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ 19 ರ ಬಾಪೂಜಿ ಕೋ ಆಪರೇಟೀವ್ ಬ್ಯಾಂಕ್‌ ಎದುರು 600 ಎಂಎಂ ವ್ಯಾಸದ ಕುಡಿಯುವ ನೀರಿನ ಮುಖ್ಯ ಕೊಳಾಯಿಯು ಒಡೆದು ಹೋಗಿದ್ದು, ಪೈಪ್ ನ್ನು ಬದಲಾಯಿಸಿ ದುರಸ್ಥಿಪಡಿಸುವ ಅವಶ್ಯಕತೆಯಿದೆ. ಆದ್ದರಿಂದ ಸದರಿ ಪೈಪ್ ಲೈನ್ ನ್ನು 2023 ರ ಜನವರಿ ಮಾಹೆಯ ದಿನಾಂಕ 03 ಮತ್ತು 04 ರಂದು ದುರಸ್ತಿಪಡಿಸಲು ಉದ್ದೇಶಿಸಲಾಗಿದೆ. ಆದ್ದರಿಂದ, ದಾವಣಗೆರೆ ನಗರದ ವಾರ್ಡ ನಂ 2,3,4,9,11,12,3,14 ಮತ್ತು 19 ರ ಸಮಸ್ತ ನಾಗರೀಕರಿಗೆ, ಸದರಿ ದಿನಗಳಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಲು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!