ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

PM Modi drives Vande Bharat Express

ಕೋಲ್ಕತ್ತಾ: ಹೌರಾದಿಂದ ನ್ಯೂ ಜಲ್ಪೈಗುರಿಗೆ ನಡುವೆ ಓಡಾಡಲಿರುವ ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಇಂದು ಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮೊದಲ ಹಾಗೂ ದೇಶದ 7ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಇದಾಗಿದ್ದು, ಮೋದಿ ಅವರು ಗುಜರಾತ್‌ನಿಂದ ವಿಡಿಯೋ ಕಾನ್ಫರೇನ್ಸ್‌ ಮೂಲಕ ಚಾಲನೆ ನೀಡಿದ್ದಾರೆ. ತಮ್ಮ ತಾಯಿ ಹೀರಾಬೆನ್‌ ಮೋದಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ ನಂತರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದಾರೆ.

ತಾಯಿ ಹೀರಾಬಾ ಅವರ ನಿಧನದ ಹಿನ್ನೆಲೆಯಲ್ಲಿ ಮೋದಿ ಅವರು ಅಹಮದಾಬಾದ್‌ಗೆ ತೆರೆಳಿದ್ದರು. ಅಂತಿಮ ವಿಧಿವಿಧಾನ ಮುಗಿಸಿದ ನಂತರ ವೀಡಿಯೊ ಕಾನ್ಫರೆನ್ಸ್ ಮೂಲಕ ಯೋಜಿಸಿದಂತೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ಕಾರ್ಯಾಲಯದ ಟ್ವಿಟ್ಟರ್‌ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಶ್ಚಿಮ ಬಂಗಾಳದಲ್ಲಿ ಇಂದಿನ ನಿಗದಿತ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಸೇರಲಿದ್ದಾರೆ ಎಂದು ಖಚಿತಪಡಿಸಲಾಗಿತ್ತು. ಕೋಲ್ಕತ್ತಾದ ಹೌರಾದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡುವುದು ಮತ್ತು ನಮಾಮಿ ಗಂಗೆ ಅಡಿಯಲ್ಲಿ ರೈಲ್ವೆಯ ಇತರ ಅಭಿವೃದ್ಧಿ ಕಾಮಗಾರಿಗಳು ಮತ್ತು ರಾಷ್ಟ್ರೀಯ ಗಂಗಾ ಮಂಡಳಿಯ ಸಭೆಯು ಯೋಜನೆಯ ಪ್ರಕಾರ ನಡೆಯಲಿದೆ ಎಂದು ಮೂಲಗಳು ತಿಳಿದ್ದವು.

ನಿಗದಿಯಂತೆ ಈಶಾನ್ಯ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಪ್ರಧಾನಿ ಮೋದಿ ಅವರು ಇಂದು ಉದ್ಘಾಟಿಸಿದರು. ವಂದೇ ಭಾರತ್ ಸ್ವಯಂಚಾಲಿತ ಬಾಗಿಲುಗಳು ಮತ್ತು ವೈಫೈ ಆಕ್ಸೆಸ್‌ನಂತಹ ಪ್ರಯಾಣಿಕರ ಸ್ನೇಹಿ ಸೌಲಭ್ಯಗಳನ್ನು ಹೊಂದಿರುತ್ತದೆ. ದೇಶದ ಏಳನೇ ವಂದೇ ಭಾರತ್ ರೈಲು ಸೋಮವಾರ ಮೊದಲ ಪ್ರಾಯೋಗಿಕ ಚಾಲನೆಯಲ್ಲಿ ನ್ಯೂ ಜಲ್ಪೈಗುರಿ – ಹೌರಾ ನಡುವೆ ಸುಮಾರು 560 ಕಿಮೀ ಪೂರ್ಣಗೊಳಿಸಲು ಸುಮಾರು 8.30 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಲಾಗಿದೆ. 7ನೇ ವಂದೇ ಭಾರತ್‌ ರೈಲು ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿ ನಡುವೆ ಸಂಪರ್ಕ ಕಲ್ಪಿಸುತ್ತದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!